(www.vknews.in) ವ್ಯಾಪಕವಾಗುತ್ತಿರುವ ಗಾಂಜಾ ಹಾವಳಿ, ಇದನ್ನು ಕಂಟ್ರೋಲ್ ಮಾಡಲೇಬೇಕು ಚಿತ್ರ ನೋಡಿರಿ. ಒಮ್ಮೆ ಎದೆ ಝಲ್ಲೆನ್ನುತ್ತದೆ. ಪರಂಗಿ ಪೇಟೆಯ ಶುಹೈಬ್ ಸಿನಾನ್ ಎಂಬ ಈ ಅಮಾಯಕ ಯುವಕನನ್ನು ಆಸ್ಪತ್ರೆಯಲ್ಲಿ ಹೋಗಿ ನೋಡಿ ಬಂದೆ. ಕಾರಣ ಇವನು ಆ್ಯಕ್ಸಿಬ್ಲೂ ಕುಡಿಯುವ ನೀರಿನ ಕಂಪೆನಿಯ ಮಾಲಕ ಮನ್ಸೂರ್ ಅಹ್ಮದ್ ರವರ ಮಾಲಕತ್ವದ ಆಝಾದ್ ಸ್ಟೀಲ್ ವ್ಯವಹಾರದಲ್ಲಿ ಪ್ರಧಾನ ಎಕೌಂಟೆಂಟ್ ಹುದ್ದೆಯಲ್ಲಿರುವ ಅಬ್ದುಲ್ ಜಲೀಲ್ ರವರ ಅಣ್ಣನ ಮಗ. ಆ್ಯಕ್ಸಿಬ್ಲೂ ಕಂಪೆನಿಯ ಜನರಲ್ ಮ್ಯಾನೇಜರ್ ಆಗಿರುವ ನಾನು ಗಾಯಾಳು ನಮ್ಮವನೇ ಎಂಬ ನೆಲೆಯಲ್ಲಿ ಭೇಟಿಯಾಗುವ ಕರ್ತವ್ಯವನ್ನು ಪಾಲಿಸಿದ್ದೆ. ಈ ರೀತಿಯ ಗಾಯ ಹೇಗಾಯಿತು? ಯಾರೋ ಮುಸ್ಲಿಮ್ ಧ್ವೇಷಿಗಳು ಮಾಡಿದ್ದಾ? ಖಂಡಿತ ಅಲ್ಲ. ಕೋಮುವಾದಿಗಳಿಗಿಂತ ಕ್ರೂರವಾಗಿ ಮುಸ್ಲಿಮ್ ಯುವಕರೇ ಮುಸ್ಲಿಮ್ ಯುವಕರ ಮೇಲೆ ಹಲ್ಲೆ, ಮಾರಣಾಂತಿಕ ಗಾಯ, ಕೊಲೆಗಳನ್ನು ನಡೆಸುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗ ತೊಡಗಿದೆ. ಇತ್ತೀಚೆಗಷ್ಟೇ ಹತ್ತೊಂಬತ್ತರ ಹರೆಯದ ಒಬ್ಬ ಮುಸ್ಲಿಮ್ ಯುವಕನನ್ನು ಇನ್ನೊಬ್ಬ ಮುಸ್ಲಿಮನೇ ಜೀಂವತ ಪೆಟ್ರೋಲ್ ಸುರಿದು ದಹಿಸಿದ ಮೈನವಿರೇಳಿಸುವ ಘಟನೆಯ ಆಘಾತ ಮಾಸುವ ಮುನ್ನವೇ ಇದೀಗ ಈ ಆಘಾತಕಾರಿ ಘಟನೆ ನಡೆದಿದೆ. ಗ್ಲಾಸ್ ನಿಂದ ತಲೆ ಮತ್ತು ಕೊರಳನ್ನು ಗೀರಿದ ಅವಸ್ಥೆಯನ್ನು ಕಾಣುವಾಗ ಇದು ಒಬ್ಬ ಮನುಷ್ಯ ಮಾಡಿದ್ದು ಹೌದಾ ಎಂದು ಹುಬ್ಬೇರಿಸುವಂತಿದೆ. ನಿಜಕ್ಕೂ ಇದನ್ನು ಮಾಡಿದ್ದು ಮನುಷ್ಯನ ರೂಪದಲ್ಲಿರುವ ಒಬ್ಬ ಮುಸ್ಲಿಮ್ ಯುವಕ. ಗಾಯಾಳು ಯುವಕನ ಹಳೆ ಸ್ನೇಹಿತ ಕೂಡಾ. ಇದುವ ಗಾಂಜಾ ಸೇವಿಸಿ ಎರಡು ಕಾಲಿನ ಮೃಗವಾಗಿ ಪರಿಣಮಿಸಿದ ಒಬ್ಬ ಯುವಕನ ಕಿತಾಪತಿ. ಇಂದು ಜಿಲ್ಲೆಯಾದ್ಯಂತ ಗಾಂಜಾ ಹರಡುತ್ತಿದೆ. ವಿಚಿತ್ರವೆಂದರೆ ಇದರಲ್ಲಿ ಹೆಚ್ಚಿನ ಪಾಲು ಮುಸ್ಲಿಮ್ ಯುವಕರದ್ದು ಎಂಬುದು. ಮುಸ್ಲಿಮ್ ದಟ್ಟಣೆಯಿರುವ ಪ್ರದೇಶಗಳಲ್ಲಿ ಇಂದು ಗಾಂಜಾ ವ್ಯಸನ ಹೆಚ್ಚಾಗುತ್ತಿದೆ. ಮಾರಾಟಗಾರರೂ ಸಾಗಾಟಗಾರು ಹಾಗೂ ಬಳಕೆದಾರರ ಪೈಕಿ ಮುಸ್ಲಿಮ್ ಯುವಕರದ್ದೇ ಮೆಜಾರಿಟಿ! ಇದು ಇದೇ ರೀತಿ ಮುಂದುವರಿದರೆ ಪರಿಣಾಮ ಏನಾದೀತು,? ಗಾಂಜಾ ವಿರುದ್ದ ಪೊಲೀಸರ ಕಾರ್ಯಾಚರಣೆ ಕೂಡಾ ಮಂದಗತಿಯಲ್ಲಿರುವುದರಿಂದ ಇನ್ನೆಷ್ಟು ಅನಾಹುತಗಳು ನಡೆಯಲಿದೆಯೇನೋ ಎಂಬ ಆತಂಕವು ನಾಗರಿಕರನ್ನು ಕಾಡುತ್ತಿದೆ. ಎಲ್ಲಾ ಮುಸ್ಲಿಮ್ ಕುಟುಂಬಗಳು ತಮ್ಮ ತಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಡಲೇ ಬೇಕಾಗಿದೆ. ಅವರವರ ಮಕ್ಕಳ ಬಗ್ಗೆ ಅವರವರು ಜಾಗ್ರತೆ ಮಾಡುವುದು ಇದಕ್ಕೆ ಸೂಕ್ತ ಪರಿಹಾರವಾಗಿದೆ. ಈ ಬಗ್ಗೆ ನಮ್ಮ ಸಮಾಜ ತುರ್ತು ಗಮನಹರಿಸಲೇಕಾಗುತ್ತದೆ. ಹುಡುಗಿಯರು ಕೂಡಾ ಗಾಂಜಾ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂಬ ಮಾಹಿತಿಗಳು ಕೂಡಾ ಆತಂಕಕಾರಿ. ನನ್ನ ಮಗ ಅಂತವರಲ್ಲ ಎಂಬವರ ಅಮಿತ ವಿಶ್ವಾಸವು ಅಪಾಯಕಾರಿಯಾಗಿದೆ. ಮಕ್ಕಳು ಯಾರ ಸಹವಾಸ ಬೆಳೆಸುತ್ತಿದ್ದಾರೆ ಎಂಬುದರ ಬಗ್ಗೆ ಹೆತ್ತವರು ನಿಗಾ ಇಡಬೇಕು.ಪೊಲೀಸ್ ಇಲಾಖೆ ಕೂಡಾ ಚುರುಕು ಗೊಂಡು ಕಾರ್ಯಾಚರಣೆ ನಡೆಸಬೇಕಾಗಿದೆ. ಇಲ್ಲವಾದಲ್ಲಿ ಇನ್ನಷ್ಟು ಭೀಕರ ಅನಾಹುತಗಳನ್ನು ನಾವು ಕಾಣುತ್ತಲೇ ಇರಬೇಕಾಗುತ್ತದೆ.
– ಡಿ. ಐ. ಅಬೂಬಕರ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.