(www.vknews.in) ; ಪ್ರತಿಯೊಬ್ಬ ತಂದೆ-ತಾಯಿಯ ಆಶಯ ಒಂದೇ ತಮ್ಮ ಮಗ/ಮಗಳು ದೊಡ್ಡವರಾಗಿ ಈ ನಾಡಿನ ಉತ್ತಮ ನಾಗರಿಕರಾಗಿ ರೂಪಗೊಳ್ಳಬೇಕು ಎಂಬುದು. ಹಾಗೆಯೇ ಅವರು ಉತ್ತಮ ಸಂಸ್ಕಾರವಂತರಾಗಿ ಬೆಳೆಯಬೇಕು ಎಂಬುದು. ಅದಕ್ಕಾಗಿ ಪಾಲಕ/ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಪರಿಸರ, ಉತ್ತಮ ಸಂಸ್ಕಾರ,ಹಲವು ಮಾನದಂಡಗಳನ್ನ ನೀಡಬೇಕೆಂಬುದು ನಮ್ಮ ಅನುಭವಿಗಳ ಮಾತಾಗಿದೆ.
ಶಿಕ್ಷಣ ಎಂದರೆ ಮಕ್ಕಳಿಗೆ ಕೇವಲ ಶಾಲೆಗೆ ಸೇರಿಸುವುದಲ್ಲ. ನಮ್ಮ ಮಗು ಪ್ರತಿನಿತ್ಯ ಏನನ್ನೂ ಕಲಿಯುತಿದ್ದೆ ? ಯಾವುದರ ಹಿಂದೆ ಅವರ ಆಸಕ್ತಿ ಹೆಚ್ಚುತ್ತದೆ ? ಯಾತಕ್ಕಾಗಿ ಆತ/ಆಕೆ.ಅಂತಹ ಆಸಕ್ತಿ ಬೆಳೆಸಿಕೊಳ್ಳುತಿದ್ದಾರೇ ? ಅವರ ಇಂತಹ ಬದಲಾವಣೆಗೆ ಕಾರಣ ಏನು ? ಎಂಬುದನ್ನ ಗಮನಿಸಬೇಕ್ಕಾದದ್ದು ಪ್ರತಿಯೊಬ್ಬ ಪಾಲಕ/ಪೋಷಕರ ಕರ್ತವ್ಯವಾಗಿದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಪಾಲಕರು ತಮ್ಮ ಒತ್ತಡದ ಮಧ್ಯೆ ಅಮ್ಮದೆ ಮಕ್ಕಳಿಗೆ ಸಮಯ ನೀಡದ ಸ್ಥಿತಿಗೆ ಬಂದಿರುವುದು ಅವರ ಮಕ್ಕಳ ಬದುಕಿಗೆ ಅವರೆ ವೈರಿಗಳಾಗಿ ಪರಿಣಮಿಸುತಿದ್ದಾರೆ. ಇದು ಮಕ್ಕಳ ಮೇಲೆ ಬಿರುತ್ತಿರುವ ಅತ್ಯಂತ ಕೆಟ್ಟ ವಿಷಮ ಪರಿಸ್ಥಿತಿಯಾಗಿದೆ.
ಪ್ರಾಚೀನ ಕವಿಯೊಬ್ಬರು ಹೀಗೆ ಹೆಳುತ್ತಾರೆ ‘ಗಿಡವೊಂದರ ಮೂಲವನ್ನ ಗುರುತಿಸಿ ಅದಕ್ಕೆ ನೀರೆರೆದರೆ ಅದರ ಕಾಂಡ,ಕೊಂಬೆ,ರೆಂಬೆ,ಎಲೆಗಳು ,ಹೂ, ಹಣ್ಣಗಳನ್ನ ವ್ಯವಸ್ಥಿತವಾಗಿ ಪೊಷಿಸಲು ಸಾಧ್ಯವಾಗುತ್ತದೆ’ ಎಂದು. ಅಂತಹ ಕಾರ್ಯವನ್ನ ನಾವು ಮಗುವಿನ ಆರಂಭಿಕ ಹಂತದಲ್ಲೆ ಗುರುತಿಸಿ ಬದಲಾವಣೆ ಮಾಡುವ ಪ್ರಯತ್ನ ಮಾಡಬೇಕು. ಒಂದು ವೇಳೆ ಮಗುವಿನ ಬೆಳವಣಿಗೆ ಉತ್ತಮ ರೀತಿಯಲ್ಲಿ ಸಾಗುತ್ತಿದ್ದರೆ ಅದಕ್ಕೆ ಮತಷ್ಟು ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಮಗು ಉತ್ತಮ ರೀತಿಯಲ್ಲಿ ಬೆಳವಣಿಗೆ ಕಂಡು ಪ್ರಗತಿ ಹೊಂದಲು ಮತಷ್ಟು ಪ್ರೇರಣೆ ದೊರೆಯುತ್ತದೆ. ಮಗುವಿನ ಪ್ರತಿ ಹಂತದ ಬದಲಾವಣೆಯ ಮೇಲೆ ಗಮನ ಹರಿಸಿದರೆ ಮಾತ್ರ ಸಮರ್ಥ ಪಾಲಕ/ಪೋಷಕರಾಗಲು ಸಾಧ್ಯ.
ಲೇಖಕರು ; ಸಿದ್ದಾರ್ಥ. ಶಿವಶರಣ ಉಪನ್ಯಾಸಕರು, ಧಾರವಾಡ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.