(www.vknews.in) ; ಸಮಾಜದಲ್ಲಿನ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಸಮಾಜ ಭಾಂದವರು ಒಗ್ಗಟಿನಲ್ಲಿ ಸ್ಪಂದಿಸಬೇಕಾದೆ. ನಮ್ಮತನ ಉಳಿವಿಗಾಗಿ ಶ್ರಮಿಸಬೇಕು. ಇದಕ್ಕೆ ಶಿಕ್ಷಣ ಅತೀ ಅಗತ್ಯ. ಇಸ್ಲಾಂ ಧರ್ಮದಲ್ಲಿ ಶಿಕ್ಷಣಕ್ಕೆ ಬಹಳಷ್ಟು ಆಧ್ಯತೆ ನೀಡಲಾಗಿದೆ. ಶಿಕ್ಷಣದಿಂದ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಆ ಮೂಲಕ ಸಮುಧಾಯ ಇನ್ನಷ್ಟು ಬಲಿಷ್ಠ ಆಗಬೇಕು ಎಂದು ನಮ್ಮ ನಾಡ ಒಕ್ಕೂಟದ (ದುಬಾಯಿ),ಯು ಎ ಇ ಅಧ್ಯಕ್ಷ ಸಲೀಮ್ ಬಾಜಿ ಹೇಳಿದರು.
ಅವರು ಮಣಿಪಾಲ ಇನ್ ಹೋಟೆಲ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ನಮ್ಮ ನಾಡ ಒಕ್ಕೂಟದ ವತಿಯಿಂದ ಸಮುಧಾಯದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಕೆರಿಯರ್ ಗೈಡೆನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಡುಪಿ ಜಿಲ್ಲಾ ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ ಅಧ್ಯಕ್ಷತೆ ವಹಿಸಿ, ನಮ್ಮ ನಾಡ ಒಕ್ಕೂಟದ ವತಿಯಿಂದ ಸಮುಧಾಯದ ಮಕ್ಕಳಿಗೆ ಪ್ರತಿ ವರ್ಷ ಪ್ರೋತ್ಸಾಹದೊಂದಿಗೆ ಶಿಕ್ಷಣಕ್ಕೆ ಆಧ್ಯತೆ ನೀಡಲಾಗುತ್ತಿದೆ.ಯುವ ಸಮುಧಾಯ ಸಿಗುವ ಸೌಲಭ್ಯಗಳನ್ನು ಸದುಪಯೋಗಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ನಮ್ಮ ನಾಡ ಕೇಂದ್ರ ಒಕ್ಕೂಟದ ಸ್ಥಾಪಕಧ್ಯಕ್ಷ ಮುಹಮ್ಮದ್ ಸಲೀಂ , ಉದ್ಯಮಿ ಯು. ಎಸ್ ವಾಹೀದ್ ದಾವುದ್ ಮಾತನಾಡಿದರು. ನಮ್ಮ ನಾಡ ಒಕ್ಕೂಟದ ಪ್ರಧಾನ ಕಾರ್ಯದರ್ಶೀ ಮಹಮ್ಮದ್ ಹುಸೈನ್ ಕಾರ್ಕಳ ,ಕೋಶಾಧಿಕಾರಿ ಅಬ್ದುಲ್ ಹಮೀದ್ ಮೂಡುಬಿದಿರೆ,ಜಿಲ್ಲಾ ಕೋಶಾಧಿಕಾರಿ ಸೈಯ್ಯದ್ ಅಜ್ಮಲ್ ಶಿರೂರು ,ಕುಂದಾಪುರ ತಾಲೂಕು ಅಧ್ಯಕ್ಷ ಎಸ್.ದಸ್ತಗಿರ್ ಕಂಡ್ಲೂರು ,ಉಡುಪಿ ತಾಲೂಕು ಅಧ್ಯಕ್ಷ ನಝೀರ್ ನೇಜಾರು,ಕಾರ್ಕಳ ತಾಲೂಕು ಅಧ್ಯಕ್ಷ ಶಾಕೀರು ಹುಸೈನ್ ಶಿಶಾ ,ಕಾಪು ತಾಲೂಕು ಅಧ್ಯಕ್ಷ ಅಶ್ರಫ್ ಪಡುಬಿದ್ರೆ ,ಬ್ರಹ್ಮಾವರ ತಾಲೂಕು ಅಧ್ಯಕ್ಷ ಶೌಕತ್ ಅಲಿ ಬಾರ್ಕೂರು, ಇನಾಯತುಲ್ಲಾ, ಯೂನಿಸ್ ಬ್ರಹ್ಮಾವರ ,ಶೇಖ್ ಪರ್ವೇಜ್ ಮದನಿ ,ಹಂಝಾತ್ ಹೆಜಮಾಡಿ, ಹಾಗೂ ಇನ್ನೀತರರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ರಫೀಕ್ ಮಾಸ್ಟರ್ ,ಸಿನಾನ್ ಝಕರಿಯಾ ,ಹನೀಫ್ ಪುತ್ತೂರು ಭಾಗವಹಿಸಿದರು. ಜಿಲ್ಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮೌಲನ ಝಮೀರ್ ಅಹ್ಮದ್ ರಶದಿ ಸ್ವಾಗತಿಸಿದರು. ಅಹ್ಮದ್ ಸಹೂದ್ ಖೀರಾತ್ ಪಠಿಸಿದರು.
ಉಪಾಧ್ಯಕ್ಷ ಅಬು ಮೊಹಮ್ಮದ್ ಕುಂದಾಪುರ ವಂದಿಸಿದರು. ಸಂಘಟನಾ ಕಾರ್ಯದರ್ಶೀ ಹುಸೈನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು.ಉಪಾಧ್ಯಕ್ಷ ಅಬು ಮುಹಮ್ಮದ್ ಕುಂದಾಪುರ ವಂದಿಸಿದರು. ಮಣಿಪಾಲ ಇನ್ ಹೋಟೆಲ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ನಮ್ಮ ನಾಡ ಒಕ್ಕೂಟದ ವತಿಯಿಂದ ಸಮುಧಾಯದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಕೇರಿಯರ್ ಗೈಡೆನ್ಸ್ ಕಾರ್ಯಕ್ರಮ ಶನಿವಾರ ನಡೆಯಿತು.
ನಮ್ಮ ನಾಡ ಒಕ್ಕೂಟದ ( ದುಬೈ ),ಯು ಎ ಇ ಅಧ್ಯಕ್ಷ ಸಲೀಮ್ ಬಾಜಿ,ಉಡುಪಿ ಜಿಲ್ಲಾ ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ, ಸ್ಥಾಪಕಧ್ಯಕ್ಷ ಮುಹಮ್ಮದ್ ಸಲೀಂ , ಉದ್ಯಮಿ ಯು. ಎಸ್ ವಾಹೀದ್ ದಾವುದ್.ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹುಸೈನ್ ಕಾರ್ಕಳ , ಕೋಶಾಧಿಕಾರಿ ಅಬ್ದುಲ್ ಹಮೀದ್ ಮೂಡುಬಿದಿರೆ,ಜಿಲ್ಲಾ ಕೋಶಾಧಿಕಾರಿ ಸೈಯ್ಯದ್,. ಸಂಘಟನಾ ಕಾರ್ಯದರ್ಶೀ ಹುಸೈನ್ ಹೈಕಾಡಿ ಹಾಗೂ ಇನ್ನೀತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.