ಮಲಾರ್ ಬದ್ರಿಯಾ ನಗರ (www.vknews.in) : ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕೊಣಾಜೆ ರೇಂಜ್ ಗೆ ಒಳಪಟ್ಟ ಮಲಾರ್ ಬದ್ರಿಯಾ ನಗರ ಸಖಾಫತುಲ್ ಇಸ್ಲಾಂ ಅರಬಿಕ್ ಮದ್ರಸ ಇದರ 2023-2024ನೇ ಸಾಲಿನ SBS (ಸುನ್ನಿ ಬಾಲ ಸಂಘ) ನೂತನ ಸಮಿತಿಯ ರಚನೆ ದಿನಾಂಕ:04/06/2023 ರಂದು ಸಖಾಫತುಲ್ ಇಸ್ಲಾಂ ಅರಬಿಕ್ ಮದ್ರಸ ಹಾಲ್ ನಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಖಾಫತುಲ್ ಇಸ್ಲಾಂ ಅರಬಿಕ್ ಮದ್ರಸದ ಸದರ್ ಉಸ್ತಾದ್ ಬಹು: ಇಬ್ರಾಹಿಂ ನಯೀಮಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಖತೀಬ್ ಉಸ್ತಾದರುಗಳಾದ ಬಹು:ಸಮದ್ ಸಖಾಫಿಯವರು ದುಅ ನೇತೃತ್ವವನ್ನು ನೀಡಿದರು ಸಹ ಅಧ್ಯಾಪಕರಾದ ಬಹು ನಿಝಾರ್ ಝುಹ್ರಿ ಕನ್ಯಾನ (ಒಮಾನ್ ಝುಹ್ರಿ) ಇವರು ಉದ್ಘಾಟನೆ ಭಾಷಣ ಮಾಡಿದರು ಸಖಾಫತುಲ್ ಇಸ್ಲಾಂ ಅರಬಿಕ್ ಮದ್ರಸ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನೂತನ ಸಮಿತಿ ಅಧ್ಯಕ್ಷರಾಗಿ ಮುಹಮ್ಮದ್ ಅಫ್ಳಲ್ ಮಲಾರ್, ಪ್ರಧಾನ ಕಾರ್ಯದರ್ಶಿಯಾಗಿ ಹಸನ್ ಫಾಹಿಂ ಮಲಾರ್, ಕೋಶಾಧಿಕಾರಿಯಾಗಿ ಉವೈಸ್ ಇಬ್ರಾಹಿಂ, ಉಪಾಧ್ಯಕ್ಷರು ಹಾಫಿಳ್ ಅಹ್ಮದ್( ಮ್ಯಾಗಸಿನ್), ಮುಹಮ್ಮದ್ ಫಾಝೀಲ್ (ಬಣ್ಣದ ಗೂಡು), ಕಾರ್ಯದರ್ಶಿಗಳು ಝಬೀಲ್ ( ಮ್ಯಾಗಸಿನ್) ನದೀಂ ಮಲಾರ್ (ಬಣ್ಣದ ಗೂಡು), ಹಾಗೂ ಕಾರ್ಯಕಾರಿ ಸದಸ್ಯರುಗಳಾಗಿ,ಖಲಂದರ್ ಶಾಫಿ,ಸಾಬಿತ್,ಸಿನಾನ್,ಸುಹೈಲ್,ರಾಯಿಝ್ ರವರನ್ನು ಆಯ್ಕೆ ಮಾಡಲಾಯಿತು.
ನೂತನ ಕಾರ್ಯದರ್ಶಿ ವಂದಿಸಿ ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಯಗೊಂಡಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.