(www.vknews.in) ; ಬೆಂಗಳೂರು ಚಾಮರಾಜಪೇಟೆ ನಡೆದಾಡುವ ದೇವರ ಸೇವಾ ಟ್ರಸ್ಟ್ ಇದರ 5ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಶಸ್ತಿ ಪ್ರಧಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಕೃಷ್ಣ ರಾಜ ಪರಿಷತ್ ಮಂದಿರದಲ್ಲಿ ನಡೆಯಿತು. ಗಾಣಗಾಪುರ ಶ್ರೀ ದತ್ತ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಬಾಪೂಜಿ ಶ್ರೀ ಕಾರ್ಯಕ್ರಮಕ್ಕೆ ದೀಪಬೆಳಗಿಸಿ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ದ.ಕ.ಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಮುಖ್ಯ ಅತಿಥಿಗಳಾಗಿ ಮಾತನಾಡಿ ಪ್ರಶಸ್ತಿ ಪಡೆದವರು ಮುಂದಿನ ದಿನಗಳಲ್ಲಿ ಉತ್ತಮವಾಗಿ ಸಮಾಜಸೇವೆ ಮಾಡಿ, ಈ ಪ್ರಶಸ್ತಿಯಿಂದ ನಿಮ್ಮ ಜವಾಬ್ದಾರಿ ಹೆಚ್ಚಾಗಿದೆ, ಸಮಾಜದಲ್ಲಿ ಬಡವರ ಕಣ್ಣೀನ್ನು ಒರೆಸುವ ಕೆಲಸವನ್ನು ಮಾಡಿ ಎಂದರು.
ಚಾಮರಾಜಪೇಟೆ ಬಿ.ಜೆ.ಪಿಮಂಡಲ ಕಾರ್ಯದರ್ಶಿ ಸುನಿಲ್ ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು. ನಡೆದಾಡುವ ದೇವರ ಟ್ರಸ್ಟ್ ಅಧ್ಯಕ್ಷ ಗೌರಮ್ಮ, ಸಂಸ್ಥಾಪಕ ಎಸ್. ಮಂಜುನಾಥ್, ಜೂನಿಯರ್ ವಿಷ್ಣುವರ್ಧನ್ ಖ್ಯಾತಿಯ ಅಪೇಕ್ಷೆ ಮಂಜುನಾಥ್ ಭದ್ರಾವತಿ, ರಾಮೋ ಹಳ್ಳಿ ಶ್ರೀ ಸಿದ್ದಾರೂಡ ಮಿಶನ್ ಆಶ್ರಮದ ಡಾ.ಆರೂಡ ಭಾರತೀ ಸ್ವಾಮೀಜಿ ಮುಖ್ಯ ಅತಿಥಿಗಳಾಗಿದ್ದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ ಡಾ. ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆಯವರಿಗೆ ಡಾ.ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಡೆದಾಡುವ ದೇವರ ಸೇವಾ ಟ್ರಸ್ಟ್ ಸಂಸ್ಥಾಪಕ ಎಸ್.ಮಂಜುನಾಥ್ ಪ್ರಾಸ್ತವಿಕವಾಗಿ ಮಾತನಾಡಿದರು. ಕುಸುಮ ಸಿ.ಆರ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.