ಪುತ್ತೂರು (www.vknews.in) : ಇಲ್ಲಿನ ಸಾಲ್ಮರ ರೈಲ್ವೆ ಕ್ರಾಸ್ ಬಳಿ, ಚುನಾವಣಾ ಪೂರ್ವದಲ್ಲಿ, ತರಾತುರಿಯಲ್ಲಿ ಉದ್ಘಾಟನೆಗೊಂಡ ಎಪಿಎಂಸಿ ಅಂಡರ್ ಪಾಸ್ ರಸ್ತೆಯು, ಅಪಾಯಕ್ಕೆ ಕೊರಳೊಡುತ್ತಿದೆ. ಈ ಅಂಡರ್ ಪಾಸ್ ರಸ್ತೆಗಾಗಿ, ಸಿದ್ಧಪಡಿಸಿದ ನೀಲಿ ನಕಾಶೆ ಯಂತೆ, ಚತುಸ್ಪತ ರಸ್ತೆಯಾಗಿ ಕಾರ್ಯ ನಿರ್ವಹಿಸಬೇಕಾಗಿದ್ದು, ಕಾಮಗಾರಿ ಪೂರ್ಣಗೊಳ್ಳದ ಕಾರಣ ದ್ವಿಮುಖ ರಸ್ತೆಯಾಗಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರೈಲ್ವೆ ಹಳಿಯ ಕೆಳಭಾಗದಲ್ಲಿ ಸುಮಾರು 600 ಮೀಟರ್ ನಷ್ಟು ನಿರ್ಮಿಸಿದ ಈ ರಸ್ತೆಯಲ್ಲಿ, ಸುಮಾರು 300 ಮೀಟರ್ ನಷ್ಟು ಅಪಾಯಕಾರಿ ತಿರುವನ್ನು ಹೊಂದಿರುತ್ತದೆ.
ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತದೆ.ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿರುವ ಶಾಲಾ ಬಸ್ಸುಗಳು, ಆಟೋರಿಕ್ಷಗಳು ಹಾಗೂ ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದು, ವಾಹನದಲ್ಲಿ ಸಂಚರಿಸುತ್ತಿರುವವರು ಹಾಗೂ ನಡೆದುಕೊಂಡು ಹೋಗುತ್ತಿರುವ ಸಾರ್ವಜನಿಕರು, ಜೀವವನ್ನು ಕೈಯಲ್ಲಿ ಹಿಡಿದು ಹೋಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣವೇನೆಂದರೆ, ಈ ರಸ್ತೆಯು ನೀಲಿ ನಕಾಶೆಯಂತೆ, ಚತುಸ್ಪತ ರಸ್ತೆಯಾಗಿ ತಯಾರಾಗಿದ್ದರೆ ಈ ತಿರುಗುಗಳಲ್ಲಿರುವ ಅಪಾಯವನ್ನು ತಪ್ಪಿಸಬಹುದಾಗಿತ್ತು ಆದರೆ ಈ ಚತುಸ್ಪತ ರಸ್ತೆಯ ಕಾಮಗಾರಿ ಕೆಲವು ಕಾರಣಗಳಿಂದ ಅರ್ಧಕ್ಕೆ ನಿಂತಿದೆ ಈ ಕಾರಣವನ್ನು ಸರಿಪಡಿಸಬೇಕಾದವರು ಅಂದು, ಮುತುವರ್ಜಿ ವಹಿಸದ ಕಾರಣದಿಂದಾಗಿ, ಈ ರಸ್ತೆಯ ಕಾಮಗಾರಿ ಸ್ಥಗಿತಗೊಂಡಿದೆ. ಸಮರ್ಪಕ ವಾಗಿ, ನೀರನ್ನು ಹರಿಸುವ ಚರಂಡಿ ಸರಿಯಾಗಿ ನಿರ್ಮಾಣವಾಗದೆ ಇರುವುದರಿಂದ, ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತು,ಇನ್ನು ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಳವಾಗಿದೆ.
ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಎಚ್ಚರಗೊಂಡು ಅಪೂರ್ಣ ಕೊಂಡ ಎಪಿಎಂಸಿ ರಸ್ತೆಯ ಕಾಮಗಾರಿಯನ್ನು ಕೂಡಲೇ ಪೂರ್ತಿ ಗೊಳಿಸಿ ಚತಸ್ಪತ ರಸ್ತೆಯನ್ನಾಗಿ ಮಾಡದಿದ್ದಲ್ಲಿ,ಈ ರಸ್ತೆಯಲ್ಲಿ ಅಪಘಾತದ ಸರಮಾಲೆ ಸಂಭವಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ನೂತನವಾಗಿ ಚುನಾಯಿಸಲ್ಪಟ್ಟ ಪುತ್ತೂರು ಶಾಸಕರು, ಪುತ್ತೂರಿನ ಅಭಿವೃದ್ಧಿ ಕಾರ್ಯದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಈಗಾಗಲೇ ಆರಂಭಿಸಿದ್ದು, ಈ ಬಗ್ಗೆಯೂ ಶೀಘ್ರ ಪರಿಹಾರ ಕಂಡುಕೊಂಡು ಸಾರ್ವಜನಿಕರಿಗೆ ಆಗುವ ಸಮಸ್ಯೆಗಳನ್ನು ನಿವಾರಿಸಬೇಕಾಗಿ,ಕೆಪಿಸಿಸಿ ಸಂಯೋಜಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ ವಿನಂತಿಸಿಕೊಂಡಿರುತ್ತಾರೆ.,
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.