(www.vknews.in) ; ನೂರುಲ್ ಹುದಾ ಮಾಡನ್ನೂರ್ ಯುಎಇ ನ್ಯಾಷನಲ್ ಸಮಿತಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನೂರುಲ್ ಹುದಾ ಶಾರ್ಜ ಸಮಿತಿ ವಾರ್ಷಿಕ ಮಹಾಸಭೆಯನ್ನು ದಿನಾಂಕ 25 ಮೇ 20223 ನೇ ಗುರುವಾರದಂದು ಇಶಾ ನಮಾಝಿನ ನಂತರ ರಾತ್ರಿ 9:00 ಕ್ಕೆ ಸರಿಯಾಗಿ ಮುಸಲ್ಲಹ ಶಾರ್ಜಹದಲ್ಲಿರುವ ಅಶ್ರಫ್ ಕೆಮ್ಮಿಂಜೆರವರ ಕಚೇರಿಯಲ್ಲಿ ಸಯ್ಯದ್ ಆಸ್ಕರ್ ಅಲಿ ತಂಗಳ್ ಕೊಲ್ಪೆರವರ ನೆರವೇರಿಸಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಉಸ್ತಾದ್ ಬಷೀರ್ ಹುದವಿ, ನೂರುಲ್ ಹುದಾ ಮಾಡನ್ನೂರ್ ಯುಎಇ ನ್ಯಾಷನಲ್ ಸಮಿತಿ ಅದ್ಯಕ್ಷರಾದ ಶರೀಫ್ ಕಾವು, ಜನಾಬ್ ಅಬ್ದುಲ್ ಖಾದರ್ ಬೈತಡ್ಕ, ಜನಾಬ್ ಅಶ್ರಫ್ ಯಾಕೂತ್, ಮುಖ್ಯ ಅತಿಥಿಗಳಾಗಿ ಶರೀಫ್ ಕೊಡಿನೀರ್, ರಝಾಕ್ ಸೊಂಪಾಡಿ, ಹೈದರ್ ಅಲಿ ಈಶ್ವರಮಂಗಳ, ಅಝೀಝ್ ಸೊಂಪಾಡಿ, ಲತೀಫ್ ತಿಂಗಳಾಡಿ, ಅಶ್ರಫ್ ಕೆಮ್ಮಿಂಜೆ, ಹಸನ್ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.
ಸಯ್ಯದ್ ಅಸ್ಕರ್ ತಂಗಳ್ ಕೋಲ್ಪೆಯವರ ನೇತೃತ್ವದಲ್ಲಿ ಮಜ್ಲಿಸುನ್ನೂರ್ ನಡೆದ ಬಳಿಕ ಉಸ್ತಾದ್ ಬಷೀರ್ ಹುದವಿ ಯವರು ಸ್ವಾಗತ ಭಾಷಣಗೈದರು.
ಸಯ್ಯದ್ ಅಸ್ಕರ್ ತಂಗಳ್ ಕೋಲ್ಪೆಯವರು ಕಾರ್ಯಕ್ರಮವನ್ನು ಅಲ್ಲಾಹನ ನಾಮದಿಂದ ಉದ್ಘಾಟಿಸಿದರು. ನೂರುಲ್ ಹುದಾ ವಿದ್ಯಾ ಕೇಂದ್ರದ ಅಲ್ಲಿಯ ವಿದ್ಯಾಭ್ಯಾಸದ ಗುಣಮಟ್ಟ ಶ್ಲಾಘಿಸಿ ಮಾತನಾಡಿದರು. ಶರೀಫ್ ಕಾವುರವರು ಸಂಧರ್ಬೋಚಿತವಾಗಿ ಮಾತಾಡಿ ನೂರುಲ್ ಹುದಾ ಮಾಡನ್ನೂರ್ ವಿದ್ಯಾ ಕೇಂದ್ರದ ಕುರಿತು ಮತ್ತು ನೂರುಲ್ ಹುದಾ ಯುಎಇ ಸಮಿತಿಗಳ ಕಾರ್ಯಾಚಟುವಟಿಕೆಗಳನ್ನು ವಿವರಿಸಿದರು.
ಚುನಾವಣಾಧಿಕಾರಿಯಾಗಿ ಜನಾಬ್ ಪಿ ಎಂ ಅಬ್ದುಲ್ ಖಾದರ್ ಹಾಜಿ ಬೈತಡ್ಕರವರನ್ನು ನೇಮಿಸಲಾಯಿತು. 2023 – 24 ರ ಸಾಲಿಗೆ ನೂರುಲ್ ಹುದಾ ಶಾರ್ಜಾ ಸಮಿತಿಗೆ ಈ ಕೆಳಗಿನ ಪ್ರಮುಖರನ್ನು ಸಾರಥಿಗಳನ್ನಾಗಿ ಆರಿಸಲಾಯಿತು.
ಪೋಷಕರು – ಜನಾಬ್ ಅಶ್ರಫ್ ಗಾಳಿಮುಖ
ಧಾರ್ಮಿಕ ಸಲಹೆಗಾರ – ಉಸ್ತಾದ್ ಬಷೀರ್ ಹುದವಿ
ಸಲಹಾ ಸಮಿತಿ ಪ್ರಮುಖರು – ಜನಾಬ್ ಅಬ್ದುಲ್ ಖಾದರ್ ಬೈತಡ್ಕ, ಜನಾಬ್ ಅಶ್ರಫ್ ಯಾಕೂತ್, ಜನಾಬ್ ಶರೀಫ್ ಕೊಡಿನೀರ್
ಗೌರವಾದ್ಯಕ್ಷರು – ಸಯ್ಯದ್ ಆಸ್ಕರ್ ಅಲಿ ತಂಗಳ್ ಕೊಲ್ಪೆ
ಅದ್ಯಕ್ಷರು – ಜನಾಬ್ ಜಬ್ಬಾರ್ ಬೈತಡ್ಕ
ಉಪಾದ್ಯಕ್ಷರು – ಜನಾಬ್ ರಝಾಕ್ ಸೊಂಪಾಡಿ, ಜನಾಬ್ ಆಸೀಫ್ ಮರೀಲ್, ಜನಾಬ್ ಹಸನ್ ಬೆಳ್ಳಾರೆ, ಜನಾಬ್ ಇಬ್ರಾಹಿಂ ಪೆರುವಾಯಿ, ಜನಾಬ್ ಮೂಸ ಪೆರುವಾಯಿ
ಪ್ರಧಾನ ಕಾರ್ಯದರ್ಶಿ – ಜನಾಬ್ ಸಿದ್ದೀಕ್ ಕೊಡಿನೀರ್
ಕಾರ್ಯದರ್ಶಿ – ಜನಾಬ್ ಹೈದರ್ ಕಲಾಂಜೆ, ಜನಾಬ್ ಝಕರಿಯಾ ಕಾವು
ಕೋಶಾಧಿಕಾರಿ – ಜನಾಬ್ ಅಶ್ರಫ್ ಕೆಮ್ಮಿಂಜೆ
ಲೆಕ್ಕ ಪರಿಶೋಧಕ – ಜನಾಬ್
ಸಂಘಟನೆ ಕಾರ್ಯದರ್ಶಿ – ಜನಾಬ್ ಅಶ್ರಫ್ ಯುಕೆ
ವರ್ಕಿಂಗ್ ಕಾರ್ಯದರ್ಶಿ – ಜನಾಬ್ ಅಲೀ ಹೈದರ್ ಮರ್ವೇಲ್
ಮೀಡಿಯಾ ಕೋರ್ಡಿನೇಟರ್ – ಜನಾಬ್
ಕನ್ವೀನರ್ – ಜನಾಬ್
ಕಾರ್ಯಕಾರಿ ಸಮಿತಿ ಸದಸ್ಯರು – ಜನಾಬ್
ನೂತನ ಪದಾಧಿಕಾರಿಗಳ ಆಸನ ಸ್ವೀಕಾರದ ಬಳಿಕ ಎಲ್ಲರೂ ಶುಭ ಹಾರೈಸಿದರು. ಸಭೆಯನ್ನು ಉದ್ದೇಶಿಸಿ ನೂತನ ಅದ್ಯಕ್ಷರಾದ ಜನಾಬ್ ಜಬ್ಬಾರ್ ಬೈತಡ್ಕ ಮಾತನಾಡಿದರು. ಕಾರ್ಯಕ್ರಮವನ್ನು ಅಝೀಝ್ ಸೊಂಪಾಡಿ ನಿರೂಪಿಸಿರು, ಪ್ರಧಾನ ಕಾರ್ಯದರ್ಶಿ ಜನಾಬ್ ಸಿದ್ದೀಕ್ ಕೊಡಿನೀರ್ ವಂದನಾರ್ಪಣೆ ಗೆಯ್ಯುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.