ನಾಗ್ಪುರ (www.vknews.in) : ಮಹಿಳಾ ವೈದ್ಯೆಯಂತೆ ವೇಷ ಧರಿಸಿ ಇಂದಿರಾಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸುತ್ತಾಡಿದ 25 ವರ್ಷದ ಯುವಕನನ್ನು ಬಂಧಿಸಲಾಗಿದೆ. ಯುವಕ ಡಾ.ಆಯಿಷಾ ಎಂಬ ಹೆಸರಿನಲ್ಲಿ ಬುರ್ಖಾ ಧರಿಸಿ ಮೂರು ವಾರ ವೈದ್ಯಕೀಯ ಕಾಲೇಜಿನಲ್ಲಿ ಕಾಲ ಕಳೆದಿದ್ದಾನೆ. ಯುವಕನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ತಾನು ಸಲಿಂಗಕಾಮಿ ಮತ್ತು ಪುರುಷರೊಂದಿಗೆ ಸ್ನೇಹ ಬೆಳೆಸಲು ಮಹಿಳೆಯಂತೆ ವೇಷ ಧರಿಸಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾಗಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಸ್ಪತ್ರೆಗೆ ನಿಯೋಜಿಸಲಾಗಿದ್ದ ಮಹಾರಾಷ್ಟ್ರ ಭದ್ರತಾ ಪಡೆ (ಎಂಎಸ್ಎಫ್) ಅಧಿಕಾರಿಗಳು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿ ಯುವಕನನ್ನು ಬಂಧಿಸಿದ್ದಾರೆ. ಆರೋಪಿಯ ಧ್ವನಿ ಮಹಿಳೆಯ ಧ್ವನಿಯನ್ನು ಹೋಲುತ್ತಿದ್ದು, ಪೊಲೀಸ್ ಅಧಿಕಾರಿಗಳೂ ಅಚ್ಚರಿಗೊಂಡಿದ್ದಾರೆ. ಈ ವ್ಯಕ್ತಿ ವಿವಾಹಿತನಾದರೂ ಆತನ ಪತ್ನಿ ಆತನನ್ನು ತೊರೆದಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ವಂಚಕನ ವಿರುದ್ಧ ವಂಚನೆ ಮತ್ತು ಸೋಗು ಹಾಕಿದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.