(www.vknews.in) ; ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಶೃಂಗಾರಬಾಗ್ ತಾಂಡ ಗ್ರಾಮಕ್ಕೆ ನೂತನ ಶಾಸಕ ಡಿ.ಜಿ ಶಾಂತನಗೌಡರು ಭೇಟಿ ಕೊಟ್ಟು , ವಿಧಾನಸಭಾ ಚುನಾವಣೆಯಲ್ಲಿ 3 ನನಗೆ ಅಧಿಕ ಮತಗಳನ್ನು ನೀಡಿ ಗೆಲ್ಲಿಸಿದ್ದಕ್ಕೆ ಗ್ರಾಮಸ್ಥರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ನಂತರ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸೂಕ್ತ ಪರಿಹಾರವನ್ನು ನೀಡಲಾವುದು ಎಂದು ಭರವಸೆಯನ್ನು ನೀಡಿದರು.
ತಾಂಡಾದಲ್ಲಿ ವಾಸಿಸುವ ಜನರಿಗೆ ಹಕ್ಕು ಪತ್ರಗಳನ್ನು ಹಾಗೂ ಕಂದಾಯ ಗ್ರಾಮಗಳನ್ನಾಗಿ ಮಾಡುವಲ್ಲಿ ನಾನು ಶ್ರಮಿಸುತ್ತೇನೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಆಡಳಿತದಲ್ಲಿರುವುದರಿಂದ ಕೆಲಸಗಳು ಆದಷ್ಟು ಬೇಗ ಆಗಲಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಈ ಗ್ರಾಮದ ಗ್ರಾಮಸ್ಥರು ಶಾಸಕರಿಗೆ ತುಂಬು ಹೃದಯದಿಂದ ಸನ್ಮಾನಿಸಿ ಶುಭಾಶಯಗಳನ್ನು ಕೋರಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.