(www.vknews.in) ; ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ದೇವರ ಹೆಸರಲ್ಲಿ ಬಿಡಲಾಗಿದ್ದ ಕೋಣವೊಂದು ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನೋರ್ವನನ್ನು ಇರಿದು ಕೊಂದು ಹಾಕಿದ ಘಟನೆ ನಡೆದಿದೆ. ಚನ್ನಗಿರಿ ತಾಲ್ಲೂಕು ಲಿಂಗದಹಳ್ಳಿ ಗ್ರಾಮದ ಉಡಸಲಾಂಭಿಕೆ ದೇವರ ಕೋಣದ ಕ್ರೌರ್ಯಕ್ಕೆ ಎನ್. ಬಸವನಹಳ್ಳಿಯ ರೈತ ಜಯಣ್ಣ(48) ಎಂಬುವವರು ಬಲಿಯಾಗಿದ್ದಾರೆ..
ತಮ್ಮ ಹೊಲದಲ್ಲಿ ಕೆಲಸ ಮಾಡುವಾಗ ಏಕಾಏಕಿ ದಾಳಿ ನಡೆಸಿದ ದೇವರ ಕೋಣ ಅಟ್ಟಾಡಿಸಿ ಇರಿದಿದೆ.ಗಂಭೀರವಾಗಿ ಗಾಯಗೊಂಡಿದ್ದ ಜಯಣ್ಣ ಸ್ಥಳದಲ್ಲೇ ಕೊನೆಯುಸಿರು ಎಳೆದಿದ್ದಾನೆ. ಇದನ್ನು ಕಂಡ ಲಿಂಗದಹಳ್ಳಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.