(www.vknews.in) ; ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ನಲ್ಲಿ ಆಶ್ರಯದಲ್ಲಿ ಪ್ರತಿವಾರ ಜಾರುಗುವ ಸಂಭ್ರಮದ “ಬುದುವಾರದ ಹಬ್ಬ ” ಕಾರ್ಯಕ್ರಮದ ಅಂಗವಾಗಿ 14ನೇ ಜೂನ್ 2023 ರಂದು ದೋಹಾ ನಗರದ ಭಾರತೀಯ ಸಾಂಸ್ಕೃತಿಕ ಕೇಂದ್ರದ “ಅಶೋಕ ಸಭಾಂಗಣ ದಲ್ಲಿ ತಾಯ್ನಾಡಿನಿಂದ ಆಗಮಿಸಿದ ಖ್ಯಾತ ಭರತನಾಟ್ಯ ಕಲಾವಿದೆ ವಿದೂಷಿ ಅಪರ್ಣ ವಿನೋದ ಮೆನನ್ ಅವರು ನೆರೆದ ಪ್ರೇಕ್ಷಕರನ್ನು ತಮ್ಮ ಅದ್ಭುತ ನೃತ್ಯಗಳ ಮೂಲಕ ಮನಸೊರೆಗೊಂಡರು.
ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರ ದ ಅಧ್ಯಕ್ಷರಾದ ಶ್ರೀ ಮಣಿಕಂಠ ಅವರು ಮತ್ತು ಉಪಾಧ್ಯಕ್ಷರಾದ ನಮ್ಮ ಹೆಮ್ಮೆಯ ಕನ್ನಡಿಗ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಹಾಗೂ ಸಮಿತಿಯ ಸರ್ವಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮ ಪ್ರತಿವಾರವೂ ಪ್ರಶಿದ್ದ ಕಲಾವಿದರ ಕಲೆಯನ್ನು ಕತಾರ್ನಲ್ಲಿ ನೆಲೆಸಿರುವ ಭಾರತೀಯ ಕಾಲಭಿಮಾನಿಗಳಿಗೆ ಉಣಬಡಿಸುವ ಈ ಕಾರ್ಯ ಶ್ಲಾಘನೀಯ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.