ಕೋಲಾರ (www.vknews.in) : ಜಮೀನು ವಿವಾದ ಹಿನ್ನೆಲೆ ಚಾಕುವಿನಿಂದ ಇರಿದು ಯುವಕನನ್ನ ಹತ್ಯೆ ಮಾಡಿದ ಧಾರುಣ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನೀಲಟೂರು ಗ್ರಾಮದಲ್ಲಿ ನಡೆದಿದೆ. ಪ್ರಸಾದ್ ರೆಡ್ಡಿ(22) ಮೃತ ಯುವಕ. ಪಕ್ಕದ ಜಮೀನಿನ ಕಿರಣ್ ರೆಡ್ಡಿ ಎಂಬವರು ಕೊಲೆ ಮಾಡಿದದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಎರಡು ಕುಟುಂಬಗಳ ಮಧ್ಯೆ ಹಲವು ವರ್ಷಗಳಿಂದ ಜಮೀನು ವಿವಾದ ನಡೆಯುತ್ತಲಿದ್ದು, ಇದೇ ವಿಚಾರಕ್ಕೆ ಎರಡು ಕುಟುಂಬಗಳು ಕೋರ್ಟ್ ಮೆಟ್ಟಿಲೇರಿದ್ದವು. ಇಂದು ಮುಂಜಾನೆ ಮಾವಿನಕಾಯಿ ವಿಚಾರವಾಗಿ ಗಲಾಟೆ ನಡೆದಿದ್ದು, ಈ ವೇಳೆ ಕಿರಣ್ ಎಂಬಾತನು ಪ್ರಸಾದ್ನಿಗೆ ಜಮೀನಿನ ಬಳಿ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಸಾದ್ ರೆಡ್ಡಿ ಕೊನೆಯುಸಿರೆಳದಿದ್ದಾನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.