(www.vknews.in) ; ಉತ್ತಮ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಪ್ರವೃತ್ತಿ ಕನ್ನಡಿಗರದು, ಅದು ನಾಡಿನಲ್ಲಾಗಲೀ – ನಾಡಿನಾಚೆಯಾಗಲಿ. ಇದಕ್ಕೆ ಕೈಗನ್ನಡಿಯಂತೆ ಸಾಗರದಾಚೆ ಕತಾರ್ ದೇಶದಲ್ಲಿ ನೆಲೆಸಿರುವ ಕನ್ನಡಿಗರ ಸಮೂಹ ಒಗ್ಗೂಡಿ ಸೆಪ್ಟೆಂಬರ್ 1 ಸಂಜೆ ಇತ್ತೀಚೆಗೆ ತೆರೆಕಂಡ ಟೋಬಿ – ( Toby ) ಚಲನಚಿತ್ರವನ್ನ ವೀಕ್ಷಿಸುವ ಮೂಲಕ ಸಂಭ್ರಮಿಸಲಾಯಿತು.
ಅತ್ಯುತ್ತಮ ಚಿತ್ರಕಥೆ, ಹಿನ್ನಲೆ ಸಂಗೀತ ಮತ್ತು ರಾಜ್ ಬಿ ಶೆಟ್ಟಿಅವರ ಮೈಜುಮ್ಮೆನಿಸುವ ನಟನೆಯೊಂದಿಗೆ ಪ್ರೇಕ್ಷಕರ ಮನ ಗೆದ್ದಿತು…
ಮಕ್ಕಳು, ಮಹಿಳೆಯರು ಸೇರಿ ಹಲವು ಕುಟುಂಬಗಳೊಂದಿಗೆ ನೂರಕ್ಕೂ ಹೆಚ್ಚು ಕನ್ನಡಾಭಿಮಾನಿಗಳು ಸೇರಿದ್ದು ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ, ಶ್ರೀಯುತ ಸುಬ್ರಮಣ್ಯ ಹೆಬ್ಬಾಗಿಲು (ಉಪಾಧ್ಯಕ್ಷರು: ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ) ಹಾಗೂ ಶ್ರೀಯುತ ಮಹೇಶ್ ಗೌಡ (ಅಧ್ಯಕ್ಷರು: ಕರ್ನಾಟಕ ಸಂಘ ಕತಾರ್ ) ರವರು ಚಿತ್ರಮಂದಿರದ ಒಳಗಡೆ ಮಧ್ಯಂತರ ವಿರಾಮದ ವೇಳೆ TOBY in QATAR ಎಂಬ ಬರವಣಿಗೆಯ ಕೇಕ್ ಕಟ್ ಮಾಡಿ ಸಂಭ್ರಮಿಸುವ ಮೂಲಕ ಪ್ರೇಕ್ಷರನ್ನು ಉರಿದುಂಬಿಸಲಾಯಿತು.
ಇದೇ ರೀತಿ ಇನ್ನೂ ಹೆಚ್ಚು ಹೆಚ್ಚು ಕನ್ನಡ ಚಲನಚಿತ್ರಗಳು ಕತಾರ್ನಲ್ಲಿ ಬಿಡುಗಡೆಯಾಗಲಿ ಎಂಬ ಆಶಯದೊಂದಿಗೆ ಶ್ರೀಯುತ ಪ್ರಭುರಾಜು ಜಗಳೂರು ಶ್ರೀಯುತ ನಾಗರಾಜ್ ಸ್ವಾಮಿ
ವಿಶೇಷವಾಗಿ ಶ್ರಮವಹಿಸಿ ಕಾರ್ಯಕ್ರಮಕ್ಕೆ ವ್ಯವಸ್ಥೆಗೊಳಿಸಿದ್ದು ಇಲ್ಲಿ ಗಮನಾರ್ಹ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.