(www. vknews.in) ; ಶಾರ್ಜಾ ಸಅದಿಯ್ಯ ಕಮಿಟಿ .ಮತ್ತು ICF KCF RSE ಸಂಘಟನೆ ಅಧೀನದಲ್ಲಿ ವರ್ಷಂಪ್ರತಿ ಬಹಳ ವಿಜೃಂಭಣೆಯಿಂದ ನಡೆಸಲ್ಪಡುವ ತಾಜುಲ್ ಉಲಮಾ,ನೂರುಲ್ ಉಲಮಾ ಅನುಸ್ಮರಣಾ ಮಜ್ಲಿಸ್ 2023ರ ಅಕ್ಟೋಬರ್ 20 ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ಶಾರ್ಜಾ ಕ್ಲಾಕ್ ಟವರ್ ಸಮೀಪ ಇರುವ ನೂರ್ ಹಿಲಾಲ್ ಪಾರ್ಟಿ ಹಾಲ್ ನಲ್ಲಿ ನಡೆಸಲು ತಿರ್ಮಾನಿಸಲಾಯಿತು. ಪ್ರಸ್ತುತ ಕಾರ್ಯಕ್ರಮಕ್ಕೆ ದುಅಃ ನೇತೃತ್ವ ನಡೆಸಲು ಜಾಮಿಅ ಸಅದಿಯ್ಯ ಸಂಸ್ಥೆಯ ಅಧ್ಯಕ್ಷರೂ ಸಮಸ್ತ ಉಪಾಧ್ಯಕ್ಷರಾದ ಬಹು; K S ಕುಂಬೋಲ್ ಆಟಕೋಯ ತಂಙಳ್ ರವರು ಆಗಮಿಸಲಿರುವರು.
ಸೆಪ್ಟೆಂಬರ್ 2 ರಂದು ಶನಿವಾರ ಮಗ್ರಿಬ್ ನಮಾಝಿನ ಬಳಿಕ ಜಲಾಲಿಯ ರಾತೀಬಿನ ಬಳಿಕ ಶಾರ್ಜಾ ಮುಹಿಮ್ಮಾತ್ ಸೆಂಟರ್ ನಲ್ಲಿ ಅದರ ಸ್ವಾಗತ ಸಮಿತಿಯು ರಚಿಸಲಾಯಿತು. ಶಿರಿಯಾ ಅಬೂಬಕ್ಕರ್ ಉಸ್ತಾದರು ದುಅಃ ನೆರವೇರಿಸಿದರು. ಶಾರ್ಜಾ ಸಅದಿಯ್ಯ ಸಮಿತಿ ಅಧ್ಯಕ್ಷರಾದ ಅಬ್ದುಲ್ಲ ಹಾಜಿ ಉಳ್ವಾರ್ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ನುಹ್ ಮಾನ್ ಕೊಲ್ಲಂಬಾಡಿ ಸ್ವಾಗತಿಸಿದರು. ಅಬೂಬಕ್ಕರ್ ಮದನಿ ತೋಕೆ (ಪಯಕಡಪುರಂ) ಉದ್ಘಾಟಿಸಿದರು.
ಸಯ್ಯಿದ್ ಜಿಫ್ರಿ ತಂಙಳ್ ಬೇಕಲ್ ಪ್ರಸ್ತಾವಿಕ ಬಾಷಣ ಮಾಡಿದರು. ಸಭೆಯಲ್ಲಿ ಶೈಖ್ ಇಮಾಮ್ ಬೇಕಲ್,ಅಬ್ದುಲ್ ಖಾದರ್ ಹಾಜಿ ಕಾಞಂಗಾಡ್, ಸಅದಿಯ್ಯ ಶಾರ್ಜಾ ಓರ್ಗೈಸರ್ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ,ಹಾಗೂ ICF, KCF, RSE, ಸಅದಿಯ್ಯ ಅಲೂಮಿನಿಯಂ ಮೊದಲಾದ ಸಂಘಟನೆಯ ನಾಯಕರು ಕಾರ್ಯಕರ್ತರು ಉಪಸ್ಥಿದ್ದರು. ಅನುಸ್ಮರಣಾ ಅಂಗವಾಗಿ ವಫಾತಾದ ಮಹಾನುಭಾವರಿಗೆ ಒಂದು ಲಕ್ಷ ಸೂರತುಲ್ ಇಖ್ಲಾಸ್ ಸಮರ್ಪಿಸಲು ನಿರ್ಧರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.