ಪುತ್ತೂರು (www.vknews.in) : ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಾಲ್ಕು ವರ್ಷದ ಬಾಲಕಿ ಭಾನುವಾರ ಮುಂಜಾನೆ ಮೃತಪಟ್ಟಿದ್ದಾಳೆ. ಮಿತ್ತೂರು ಸಮೀಪದ ಪಾಟ್ರಕೋಡಿ ನಿವಾಸಿಯಾಗಿರುವ ಹಾಗೂ ಪುತ್ತೂರು ವಲಯ SKSSF ಅಧ್ಯಕ್ಷರಾದ ಇಬ್ರಾಹಿಂ ಬಾತಿಷಾ ರವರ ಮಗಳು ಜಮೀಲಾ ಸನಿಕ ಮೃತಪಟ್ಟ ಬಾಲಕಿ.
ಪುತ್ತೂರಿನ ಮುರದಲ್ಲಿರುವ ಅಲ್ ಬಿರ್ರ್ ಸ್ಕೂಲ್ ನ ಎಲ್.ಕೆ.ಜಿ. ಯಲ್ಲಿ ಕಲಿಯುತ್ತಿದ್ದ ಬಾಲಕಿ, ಅನಾರೋಗ್ಯದಿಂದ ಇದ್ದು ಬೆಂಗಳೂರಿನ ನಾರಾಯಣ ಹೃದಯಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಭಾನುವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.
ಮಗುವಿನ ಜನಾಝದ ಪರಿಪಾಲನಾ ಕ್ರಿಯೆ ಬೆಂಗಳೂರಿನಲ್ಲಿ ನಡೆಸಿ ಮಿತ್ತೂರು ಪಾಟ್ರಕೋಡಿಯಲ್ಲಿರುವ ಇಬ್ರಾಹಿಂ ಬಾತಿಷಾ ರವರ ಮನೆಗೆ AIKMCC ಅ್ಯಂಬುಲೆನ್ಸ್ ನಲ್ಲಿ ತರುತ್ತಿದ್ದಾರೆ, 5:00 ಘಂಟೆಯ ಸಮಯಕ್ಕೆ ಮನೆಗೆ ತಲುಪಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.