(www.vknews.in) : ಹ್ರದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೂ ಆರೋಗ್ಯ ವಂತಳಾಗಿಯೇ ಕಾಣುತ್ತಿದ್ದ ಮಗು… ಸಾವಕಾಶವಾಗಿ ಶಸ್ತ್ರಕ್ರಿಯೆ ಯೊಂದನ್ನು ನಡೆಸಲು ವೈದ್ಯರು ಸೂಚಿಸಿದ್ದರು. ಈ ಮಧ್ಯೆ ಕುಟುಂಬ ಸಮೇತ ಪವಿತ್ರ ಉಮ್ರಾ ಕರ್ಮವನ್ನು ನಿರ್ವಹಿಸಿ ಬಂದಿದ್ದರು,ಮಗುವನ್ನು ಶಾಲೆಗೂ ದಾಖಲು ಮಾಡಿದ್ದರು. ಇದ್ದಕ್ಕಿದ್ದಂತೆಯೇ ಇತ್ತೀಚೆಗೆ ಮಗು ತೀವ್ರ ಅನಾರೋಗ್ಯಳಾದಾಗ ಬೆಂಗಳೂರಿನ ನಾರಾಯಣ ಹ್ರದಯಾಲಯದಲ್ಲಿ ದಾಖಲುಮಾಡಿದ್ದರು.
ಲಕ್ಷಾಂತರ ರೂಪಾಯಿ ಗಳನ್ನು ವ್ಯಯಿಸಿ ಚಿಕಿತ್ಸೆ ಮಾಡುತ್ತಾ ಕಂದಮ್ಮಳ ಜೀವರಕ್ಷಿಸಲು ಶತಪ್ರಯತ್ನ ಪಡುತ್ತಿದ್ದರೂ ಕೊನೆಗೆ ಶಸ್ತ್ರಕ್ರಿಯೆಗೂ ಸ್ಪಂದಿಸದೆ , ಅಲ್ಲಾಹನ ಅನುಲ್ಲಂಘನೀಯ ವಿಧಿಯ ಮುಂದೆ ಆ ಮಗು ಕೊನೆಯುಸಿರೆಳೆಯಿತು. ಅಲ್ಲಾಹನೇ…! ಸಹನೆ ನೀಡು…ಮಾತಾ ಪಿತರಿಗೆ ಫಲಶ್ರುತಿಯಾದ ಸಂತಾನಗಳಲ್ಲಿ ಸೇರಿಸು.. ಸ್ವರ್ಗೋದ್ಯಾವನದಲ್ಲಿ ಒಂದು ಗೂಡಿಸು….ಆಮೀನ್…
“ಅಲ್ಲಾಹನು ಹೇಳುತ್ತಿದ್ದಾನೆಂದು ಪ್ರವಾದಿ ಸ.ಅ.ರು ಹೇಳಿದರು: ನನ್ನ ದಾಸನಾದ ಸತ್ಯ ವಿಶ್ವಾಸಿಯ ನಿಕಟ ಬಂಧುವನ್ನು ನಾನು ಕರೆಸಿಕೊಂಡಾಗ (ಅರ್ಥಾತ್ ಮರಣಗೊಳಿಸಿದಾಗ) ಆ ಸತ್ಯವಿಶ್ವಾಸಿಯು ಸಹನೆಯೊಂದಿಗೆ ತನ್ನ ಪ್ರತಿಫಲವನ್ನು ಆಗ್ರಹಿಸಿದರೆ ಅವನಿಗೆ ಸ್ವರ್ಗ ವಲ್ಲದೆ ಬೇರೆ ಪ್ರತಿಫಲವಿಲ್ಲ.”
✒️ ಫೈಝೀ ಬಪ್ಪಳಿಗೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.