ಮಂಗಳೂರು (www.vknews.in) : ಕೋಮು ವಿದ್ವೇಶ ಭಾಷಣಕ್ಕೆ ಕುಖ್ಯಾತಿಯಾದ ಮತ್ತು ಬಹುಕೋಟಿ ಹಣ ವಂಚನೆ ಆರೋಪಿತೆ ಚೈತ್ರಾಳ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಅವಳ ಹೆಸರಿನ ಪದಬಳಕೆ ಬಗ್ಗೆ ಊರಿನವರು ಗಂಭೀರವಾಗಿ ಚಿಂತಿಸಿದಂತಿದೆ. ಚೈತ್ರಾ ಹೆಸರಿನೊಂದಿಗೆ ತಮ್ಮ ಊರಿನ ಹೆಸರು ಬಳಕೆಗೆ ನಿರ್ಭಂಧಿಸಿ ಕಾನೂನು ಮೊರೆ ಹೋಗಿದ್ದು ಸ್ವಾಗತಾರ್ಹ. ಆದರೆ, ಇದೇ ಚೈತ್ರಾಳು, ಅವಳ ಹಿತ ಸಂಘಟನೆಗಳ ಸಲಹೆಯಂತೆ ಒಂದು ನಿರ್ಧಿಷ್ಟ ಸಮುದಾಯದ ವಿರುದ್ಧ ಕೋಮು ವಿದ್ವೇಶಿತ ಪ್ರಚೋದನಕಾರಿ ಭಾಷಣ ಮಾಡಿ ಸಮಾಜದ ಸ್ವಾಸ್ತ್ಯ ಕೆಡಿಸುವ ಸಂದರ್ಭದ ಅದೆಷ್ಟೋ ವರ್ಷಗ ಳಿಂದ ಮೌನವಾಗಿದ್ದುದು ಖೇದಕರ.
ಇದೇ ಚೈತ್ರಾಳ ಊರಿನವರು ಹಿಂದೆಯೇ ಇಂತಹ ದುಶ್ಟ ಶಕ್ತಿಗಳ ವಿರುದ್ಧ ಲಗಾಮು ಹಾಕಿದ್ದಿದ್ದರೆ ಇಂದು ಅವರ ಊರಿನ ಹೆಸರು ಜಾಗತಿಕ ಮಟ್ಟದಲ್ಲಿ ಮೆರೆಯುತ್ತಿರಲಿಲ್ಲ. ಚೈತ್ರಾಳಂತೆಯೇ ಇನ್ನೂ ಅದೆಷ್ಟೋ ಊರಿನ ಹೆಸರುಗಳು ಭವಿಷ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಮೆರೆಯುವ ಮುನ್ನವೇ ಊರಿನವರು ಎಚ್ಚೆತ್ತು ಕೋಮು ವಿದ್ವೇಶಕ ಬಾಷಣ ಮಾಡುವವರ, ಪ್ರಚೋದನಕಾರಿ ಹೇಳಿಕೆ ನೀಡಿ ಗಲಭೆ ಎಬ್ಬಿಸುವವರನ್ನು ಊರಿಂದ ಆಚೆಗೆ ಸಾಗ ಹಾಕಬೇಕಾಗಿದೆ.
ಕೆ.ಅಶ್ರಫ್ ( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.