ಕೆಐಸಿ.. ಹಾಗೆಂದರೇನು?? ಅಲ್ಲಿ ಏನನ್ನು ಕಲಿಸಲಾಗುತ್ತಿದೆ? ಕೆಐಸಿಗೆ ನಾವು ಯಾಕೆ ಸಹಾಯ ಮಾಡಬೇಕು? ಇದರಿಂದ ನಮಗೇನು ಲಾಭ..?
ಆತ್ಮೀಯರೇ ಇಂತಹಾ ಪ್ರಶ್ನೆಗಳು ತಮಗೂ ಇದ್ದರೆ ಚಿಂತೆ ಬಿಟ್ಟು ಬಿಡಿ, ಉತ್ತರ ಇಲ್ಲಿದೆ…….
ಕೆ.ಐ.ಸಿ ಯಾ…. ಕರ್ನಾಟಕದ ಪ್ರಥಮ ಸಮನ್ವಯ ಶಿಕ್ಷಣ ಕೇಂದ್ರ..
ಹಾಗೆಂದರೇನು…. (www.vknews.in) : ಕರ್ನಾಟಕದ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನಿಂದ (ಸುಳ್ಯ-ಮೈಸೂರು ಹೆದ್ದಾರಿ) 8 ಕಿಲೋ ಮೀಟರ್ ದೂರದಲ್ಲಿ ಕುಂಬ್ರ ಎಂಬ ಪಟ್ಟಣದಲ್ಲಿ ಸರಿ ಸುಮಾರು 19ರ ದಶಕದಲ್ಲಿ ತಲೆ ಎತ್ತಿ ನಿಂತಿರುವ ಸಮನ್ವಯ ಶಿಕ್ಷಣ ಕೇಂದ್ರವೇ ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆ.ಐ.ಸಿ)..
ಕೆಐಸಿಗೆ ನಾವು ಯಾಕೆ ಸಹಾಯ ಮಾಡಬೇಕು?
🔘ವಿದ್ಯೆಯ ಹಯಾತ್ ಇಲ್ಮ್ ದೀನಿನ ಜೀವನಾಡಿಯಾಗಿದೆ. ವಿಧ್ಯೆ ಇದ್ದರೆ ಮಾತ್ರ ದೀನ್ ಇರಬಹುದು, ಅದಕ್ಕಿರುವ ಉದಾಹರಣೆ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತ… ಅಲ್ಲಿ ಇಲ್ಮನ್ನು ಬೆಳೆಸದಿದ್ದಾಗ, ದೀನೀ ಪಂಡಿತರ ಸೃಷ್ಟಿ ಮಾಡದಿದ್ದಾಗ ಆ ಪ್ರದೇಶಗಳಲ್ಲಿ ಇಸ್ಲಾಮಿನ ಸುಂದರತೆ ಇಲ್ಲದಾಯಿತು. ಇನ್ನು ನಮ್ಮ ಮುಂದೆ ಇರುವ ಜವಾಬ್ದಾರಿ ಆ ಭಾಗದಲ್ಲಿ ದೀನಿನ ಸುಂದರತೆಯ ಪಸರಿಸುವಿಕೆ. ಇಲ್ಮಿನ ಕೇಂದ್ರ ಮಾಡುವಿಕೆ, ಪಂಡಿತರ ಸೃಷ್ಟಿ ಇತ್ಯಾದಿ. ಈ ಗುರಿಯೊಂದಿಗೆ ನಮ್ಮ ಸಂಸ್ಥೆ ಕಾರ್ಯಚರಿಸುತ್ತಿದೆ.
🔘ಸಮನ್ವಯ ವಿದ್ಯಾಭ್ಯಾಸ ಆಧುನಿಕ ಕಾಲಕ್ಕೆ ಅತಿ ಮುಖ್ಯವಾಗಿ ಬೇಕಾದದ್ದು ಸಮನ್ವಯದ ಶಿಕ್ಷಣ.ಮಕ್ಕಳ ವಿದ್ಯೆ ಆಳ ಅಳತೆಯ ಮಟ್ಟ ಹೇಳತೀರದಷ್ಟಕ್ಕೆ ಮುಟ್ಟಿದೆ. ಅಲ್ಲಾಹನಿದ್ದಾನಾ…?, ಇಸ್ಲಾಂ ಧರ್ಮ ಇದೆಯಾ…?,ಇಲಾಹನ ಅವಶ್ಯಕತೆ ಇದೆಯಾ…? ಎಂದು ಕೇಳಲ್ಪಡುವ ಈ ಕಾಲದಲ್ಲಿ ಅವರದೇ ಆದ ಶಾಸ್ತ್ರೀಯ ಅಧ್ಯಯನದ ಮೂಲಕವೇ ಉತ್ತರಿಸುವ ಶಕ್ತರನ್ನು ನಿರ್ಮಿಸುವುದು ಸಮುದಾಯಕ್ಕೆ ಅತ್ಯಾವಶ್ಯಕ, ಇಂತಹಾ ಆಲಿಂ ಗಳ ಉತ್ಪತ್ತಿಯನ್ನು ಕೆಐಸಿ ಸಂಸ್ಥೆಯು ಮಾಡುತ್ತಿದೆ.
ಪ್ರಸಕ್ತವಾಗಿ ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆ ವಿದ್ಯಾಭ್ಯಾಸ ಸಮೂಹದೊಂದಿಗಿರುವ ನಮ್ಮ ಕರ್ತವ್ಯವನ್ನು ಕೆಐಸಿ ಕಲಿಸಿ ಕೊಡುತ್ತದೆ.ಈ ಸಮೂಹವೂ ಇವತ್ತು ಹಲವು ತೊಂದರೆಗಳನ್ನು ಅನುಭವಿಸುತ್ತಿದೆ.ಇದಕ್ಕೆಲ್ಲಾ ಪ್ರಮುಖ ಕಾರಣ ನಮ್ಮಲ್ಲಿ ಶಿಕ್ಷಣದ ಕೊರತೆ ಹಾಗೂ ಅತೀ ದೊಡ್ಡ ದೌರ್ಬಲ್ಯ ಸರಕಾರಿ ನೌಕರಿಯನ್ನು ಆಯ್ಕೆ ಮಾಡದೇ ಇರುವುದು. ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಕೊಡುತ್ತಾ ಸಮೂಹದಲ್ಲಿ ತಲೆ ಎತ್ತಿ ನಡೆಯುವಂತೆ ಕೆಐಸಿ ತನ್ನ ಕಾರ್ಯವೈಖರಿ ಗಳನ್ನು ಮಾಡುತ್ತಿದೆ.
ಉತ್ತಮ ನಡುವಳಿಕೆ ಸಮಾಜದಲ್ಲಿ ಹಲವಾರು ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದಾರೆ.ಅದರಲ್ಲಿ ಅಧಿಕವೂ ಮುಸ್ಲಿಂ ಸಮುದಾಯದ ಯುವಕರೇ.ಈ ನಿಲುವಿನಲ್ಲಿ ಸುಸಜ್ಜಿತವಾದ ಕ್ಯಾಂಪಸ್ಸಿನೊಂದಿಗೆ ಪ್ರಕೃತಿ ರಮಣೀಯವಾದ ತಾಣದೊಂದಿಗೆ ಸಮನ್ವಯ ವಿದ್ಯಭ್ಯಾಸವನ್ನು ಕೆ.ಐ.ಸಿ ಯ ವಿದ್ಯಾರ್ಥಿಗಳು ಪಡೆಯುತ್ತಾರೆ.5 ವಕ್ತ್ ಇಲಾಹನೆಡೆಗೆ ಭಾಗಿ ಕುರ್ ಆನ್ ವಾಚಿಸುವ ಮುಖಾಂತರ ತಮ್ಮ ಸಂಸ್ಥೆಗೆ ಸಹಕರಿಸುವ ದಾನಿಗಳಿಗೆ ಬೇಕಾಗಿ ದುವಾ ಆನ್ನು ಮಾಡುತ್ತಾರೆ ಮಾತ್ರವಲ್ಲದೇ ಪ್ರವಾದಿ ವರ್ಯರ ಚರಿತ್ರೆಗಳು ಹಾಗೂ ಇಸ್ಲಾಮೀಕರಣದ ಹಲವು ವಿಷಯಗಳ ಕುರಿತು ಅಧ್ಯಯನ ನಡೆಸುತ್ತಾರೆ.
ಕಾಲೋಚಿತ ವಿಷಯಗಳೆಡೆಗೆ ಚಿಂತನೆ ತಮ್ಮ ಚಿಂತನೆಯನ್ನು ಕೇವಲ ಪಠ್ಯ ವಿಷಯಗಳತ್ತ ಮಾತ್ರ ಹರಿಸದೆ ತಮ್ಮ ಸುತ್ತ ಮುತ್ತ ನಡೆಯುವ ವಿಷಯಗಳ ಕುರಿತು ಅವಲೋಕಿಸುತ್ತಾರೆ. ಸಾಮಾನ್ಯ ಜ್ಞಾನವನ್ನು ಕರಗತ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರಿಗೆ ಇರಬೇಕಾದ ವೈಶಿಷ್ಟ್ಯತೆಗಳು ಕೆ.ಐ.ಸಿ ವಿದ್ಯಾರ್ಥಿಗಳಲ್ಲಿ ಮೂಡಿ ಬರುತ್ತದೆ.
ಸಂಘಟನಾ ಚತುರತೆ ವಿದ್ಯಾರ್ಥಿಗಳೆಡೆಯಲ್ಲಿಯೇ ವಿದ್ಯಾರ್ಥಿಗಳ ಪ್ರತಿಭೆಯನ್ನು ಪೋಷಿಸುವ ಸಲುವಾಗಿ ಸಂಘಟನೆಯನ್ನು ರೂಪಿಸಿ ಭಾಷಣ,ಬರಹ,ಸಂಶೋಧನೆ ಈ ರೀತಿಯ ಹಲವು ಕಾರ್ಯದಲ್ಲಿ ನೈಪುಣ್ಯತೆಯನ್ನು ಪಡೆಯುತ್ತಾರೆ ಮಾತ್ರವಲ್ಲದೇ ನಮ್ಮ ದಿನ ನಿತ್ಯ ಜೀವನದಲ್ಲಿ ಆರೋಗ್ಯಕ್ಕೆ ಏನಾದರೂ ಏರು ಪೇರು ಉಂಟಾದರೆ ಪ್ರಥಮ ಚಿಕಿತ್ಸೆ ಎನ್ನುವ ನಿಲುವಿನಲ್ಲಿ ಕೆಲವೊಂದು ಚಿಕಿತ್ಸೆಗಳ ಕುರಿತು ಈ ವಿದ್ಯಾರ್ಥಿಗಳು ಮೇಲ್ನೋಟದ ಅರಿವನ್ನು ಪಡೆದಿರುತ್ತಾರೆ.ಮನೆಯಲ್ಲಿ ವಿದ್ಯುತ್ ಎಲೆಕ್ಟ್ರೀಕ್ ವಸ್ತುಗಳ ಕುರಿತು ಅದರ ಕಾರ್ಯ ವೈಖರಿಗಳ ಕುರಿತು ಕೂಡ ತಿಳಿದಿರುತ್ತಾರೆ.
ಇಂತಹಾ ಪ್ರತಿಭಾವಂತ ವಿದ್ಯಾರ್ಥಿ ಸಮೂಹವನ್ನು ಉಚಿತ ಶಿಕ್ಷಣದೊಂದಿಗೆ ಬೆಳೆಸುವಾಗ ದಾನಿಗಳ ಸಹಕಾರ ನಿರಂತರವಿರಲಿ ಎಂಬ ಅಪೇಕ್ಷೆಯೊಂದಿಗೆ… ಅಲ್ಲಾಹನು ನಮ್ಮೆಲ್ಲಾ ಸಹಾಯ ಸಹಕಾರಗಳನ್ನು ಸ್ವೀಕರಿಸಲಿ. ಆಮೀನ್ ……
A.S.KOUSARY (ಓರ್ಗನೈಸರ್, ಕೆಐಸಿ ಸೌದಿ ಅರೇಬಿಯಾ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.