ಜೆದ್ದಾ(www.vknews.in): ಇಂಡಿಯನ್ ಓವರ್ಸೀಸ್ ಕಾಂಗ್ರೆಸ್, ಸೌದಿ ಅರೇಬಿಯಾ (IOC) ಹಜ್ಜಾಜಿಗಳ ಸೇವೆ ಮಾಡಲು ಸೌದಿಯ ನಾನಾ ಕಡೆಗಳಲ್ಲಿ ನೆಲೆಸಿರುವ ಕಾರ್ಯಕರ್ತರು ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಲಕ್ಷಗಟ್ಟಲೆ ಮುಸ್ಲಿಮರು ಒಂದುಗೂಡಿ, ಜನಸಂದಣಿಯಿಂದ ಮುಳುಗಿಹೋಗುವ, ಭೂಮಿಯ ಕೇಂದ್ರ ಬಿಂದುವಾದ ಮಕ್ಕಾ ಪಟ್ಟಣದ ಕಡೆಗೆ ಆಗಮಿಸುತ್ತಾರೆ.ಹಜ್ ಸ್ವಯಂ ಸೇವಕರು ದಿಕ್ಕು ತಪ್ಪಿ ಕಂಗಾಳಾದ ಹಾಜಿಗಳಿಗೆ ಪ್ರೀತಿಯ ಮಾತಿನ ಮೂಲಕ ಅವರ ಸೇವೆ ಮಾಡುತ್ತಾರೆ. ಕಳೆದ ಎರಡು ವರ್ಷಗಳಿಂದ ಹಜ್ಜಾಜಿಗಳ ಸೇವೆಯನ್ನು ಮಾಡುತ್ತಾ ಬಂದಿರುವ IOC ಈ ವರ್ಷವೂ ಯಶಸ್ವಿಯಾಗಿ ಸೇವೆ ನೀಡಿದೆ. ಸ್ವಯಂ ಸೇವಕರ ಸಮ್ಮಿಲನ ಕಾರ್ಯಕ್ರಮವು IOC ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್ ಜಾವಿದ್ ಕಲ್ಲಡ್ಕರವರ ನೇತೃತ್ವದಲ್ಲಿ ಜಿದ್ದಾದ ಮೌಂಟೈನ್ ಇಸ್ತಿರಾಹ್ ಸಭಾಂಗಣದಲ್ಲಿ ಗುರುವಾರ ರಾತ್ರಿ ರಾಷ್ಟ್ರಗೀತೆಯೊಂದಿಗೆ ಆರಂಭಗೊಂಡು…….ಭವಿಷ್ಯದಲ್ಲಿ ಇನ್ನಷ್ಟು ಬಲಿಷ್ಟರಾಗಲು ಎಲ್ಲಾ ಸದಸ್ಯರ ಸಲಹೇ ಸೂಚನೆ, ಔತನಕೂಟ, ಕ್ರೀಟಾಕೂಟದೊಂದಿಗೆ ಯಶಸ್ವಿಯಾಗಿ ನಡೆಯಿತು. ನಂತರ ಮುಂದಿನ ಕಾರ್ಯ ವೈಖರಿಯ ಬಗ್ಗೆ ಸುಧೀರ್ಘ ಚರ್ಚಿಸಿ ಮುಂದಿನ ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಸಭೆಯು ಅನುಮೋದಿಸಿತು.
2024-25ನೇ ಸಾಲಿನ ಹಜ್ಜ್ ಸ್ವಯಂ ಸೇವಕರ ಕೂಟಕ್ಕೆ ಅಧ್ಯಕ್ಷರಾಗಿ ಇಬ್ರಾಹಿಂ ಕನ್ನಂಗಾರ್, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಗಬ್ಗಲ್, ಹಣಕಾಸು ಕಾರ್ಯದರ್ಶಿಯಾಗಿ, ಇಮ್ತಿಯಾಝ್ ಮಂಗಳೂರು, ಸಂಯೋಜಕರಾಗಿ ಜೀಶನ್ ಬಾಳೆ ಹೊನ್ನೂರು, ಜಿದ್ದಃ ಸಂಯೋಜಕರಾಗಿ: ಜಾಸೀಂ ಕಲ್ಲಡ್ಕ, ಸಹ ಹಣಕಾಸು ಕಾರ್ಯದರ್ಶಿ : ಇಲ್ಯಾಸ್ ಕನ್ನಂಗಾರ್,ಕೇಂದ್ರ ಸಂಯೋಜಕರಾಗಿ : ಜಮಾಲ್ ಸ್ವಾಲಿಹ್ ಕನ್ನಂಗಾರ್ , ಪೂರ್ವ ಪ್ರಾಂತ್ಯ ಸಂಯೋಜಕರಾಗಿ ಅಬ್ದುಲ್ ಅಝೀಝ್ ಆತೂರು, ಅಬ್ದುಲ್ ಅಝೀಝ್ ಮೂಳೂರು, ಅಝರ್ ಮುಟ್ಟಿಕ್ಕಲ್, ಪಶ್ಚಿಮ ಪ್ರಾಂತ್ಯ ಸಂಯೋಜಕರಾಗಿ ನಾಸೀರ್ ಬಾಳೆಹೊನ್ನೂರು, ಹಾರಿಸ್ ಬಿಳಗುಳ, ಸಾಹುಲ್, ಬಾಷಾ ವಾಮಂಜೂರು ರವರನ್ನು ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಸಭೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ನಿರ್ಮಿಸಬೇಕೆಂಬ ಸಾರ್ವಜನಿಕರ ಹಕ್ಕೊತ್ತಾಯಕ್ಕೆ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ಬೆಂಬಲ ಸೂಚಿಸಲಾಯಿತು. ಇಮ್ರಾನ್ ಅಡ್ಡೂರು ಕಾರ್ಯಕ್ರಮ ನಿರೂಪಿಸಿ ಹಾರಿಸ್ ಬಿಳಗುಳ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.