ಮಂಗಳೂರು(wwwvknews.in):ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಕೊಣಾಜೆ ಪೋಲಿಸ್ ಠಾಣಾ ವ್ಯಾಪ್ತಿಯ ಉಳ್ಳಾಲ ತಾಲ್ಲೂಕಿನ ಬೋಳ್ಯಾರು ಎಂಬಲ್ಲಿ ಜೂನ್ 9ರಂದು ನಡೆದ ವಿಜಯೋತ್ಸವಕ್ಕೆ ಸಂಬಂಧಿಸಿದ ಘರ್ಷಣೆ ಪ್ರಕರಣದಲ್ಲಿ ನಾಲ್ಕನೇ ಆರೋಪಿ ಅಬೂಬಕ್ಕರ್ ಸಿದ್ದೀಕ್ ಕುಕ್ಕೋಟ್ ಎಂಬಾತನಿಗೆ ಗೌರವಾನ್ವಿತ ಹೈಕೋರ್ಟ್ ಪೀಠ ಜಾಮೀನು ನೀಡಿದೆ. ನ್ಯಾಯಾಧೀಶೆ ಎಂ.ಜಿ ಉಮಾ ಆವರಿರುವ ಏಕಸದಸ್ಯ ಪೀಠವು ಜಾಮೀನು ಮಂಜೂರು ಮಾಡಿದೆ ನಾಲ್ಕನೇಯ ಆರೋಪಿಯ ಪರವಾಗಿ ನ್ಯಾಯವಾದಿ ಆಲೀಮಾ ಆಮೀನ್ ವಾದ ಮಂಡಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿಗಳಾದ ಅರ್ಷಾದ್ ಎಂಪಿ,ಆಸ್ಪಾಕ್ ಬೋಳ್ಯಾರ್ ಮತ್ತು ಅಪ್ರೀಝ್ ಸಜೀಪ ಸಹಕರಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.