ಬಂಟ್ವಾಳ (www.vknews.in) : ಮಸ್ಜಿದುಲ್ ಬಿಲಾಲ್ ಹಾಗು ಮುನೀರುಲ್ ಇಸ್ಲಾಂ ಎಜುಕೇಷನ್ ಸೆಂಟರ್ ಏನಾಜೆ ಬುಡೋಳಿಯಲ್ಲಿ ಅಸಂವಿಧಾನಿಕ ವಖ್ಫ್ ತಿದ್ದುಪಡಿ ಕಾನೂನಿನ ವಿರುದ್ಧ ಜನಜಾಗೃತಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಜಮಾತ್ ಅಧ್ಯಕ್ಷರಾದ ಮುಹಮ್ಮದ್ ಅಶ್ರಫ್ ಸತ್ತಿಕಲ್ಲು ವಹಿಸಿದ್ದರು.
ಜನಜಾಗೃತಿ ಸಭೆಯಲ್ಲಿ ಮಿತ್ತಬೈಲ್ ಕೇಂದ್ರ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ವಖ್ಫ್ ತಿದ್ದುಪಡಿಯ ಕಾಯ್ದೆಯಲ್ಲಿರುವ ಅಂಶಗಳ ಬಗ್ಗೆ ವಿವರಿಸಿ,ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿದ ಕರಾಳ ಕಾನೂನಿನ ಬಗ್ಗೆ ಜನತೆಯಲ್ಲಿ ಜನಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿ ಕೊಂಡ ಕಾರ್ಯಕ್ರಮ ಶ್ಲಾಘನೀಯ ಎಂದರು. ಮುಂಬರುವ ದಿನಗಳಲ್ಲಿ ಎಲ್ಲಾ ಜಮಾತ್ ಕಮಿಟಿಗಳು ಈ ರೀತಿಯಲ್ಲಿ ಕಾರ್ಯಕ್ರಮ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಆವಶ್ಯ ಕತೆಯ ಬಗ್ಗೆ ಹಾಗು ಕಾನೂನಿನಲ್ಲಿರುವ ಲೋಪದೋಷಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಬದ್ರಿಯಾ ಜುಮಾ ಮಸೀದಿ ಗಡಿಯಾರ್ ಖತೀಬರಾದ ಉಮ್ಮರ್ ದಾರಿಮಿ,ಮಸ್ಜಿದ್ ಬಿಲಾಲ್ ಖತೀಬರಾದ ಮಜೀದ್ ದಾರಿಮಿ,ಬದ್ರಿಯಾ ಜುಮಾ ಮಸೀದಿ ಗಡಿಯಾರ್ ಅಧ್ಯಕ್ಷರಾದ ರಿಯಾಜ್ ಕಲ್ಲಗೆ, ಬುಡೋಳಿ ಯೂತ್ ಫೆಡರೇಷನ್ ಅಧ್ಯಕ್ಷ ರಾದ ಕಲಂದರ್ ಶಾಫಿ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.