(www.vknews.in) : ಈ ರೀತಿ ಹಿಂಸಾತ್ಮಕವಾಗಿ ಗೋವು ಸಾಗಟ ಮಾಡುವುದನ್ನು ಪ್ರಜ್ಞಾವಂತ ಮುಸ್ಲಿಮರು ಖಂಡಿಸಲೇ ಬೇಕು, ಮೂಕ ಪ್ರಾಣಿಯನ್ನು ಈ ರೀತಿ ಸಾಗಟ ಮಾಡೋದು ಅತ್ಯಂತ ಹೇಯ ಕ್ರತ್ಯ.. ನಿಜಕ್ಕೂ ಮುಸ್ಲಿಮ್ ನಾಯಕರು, ಬರಹಗಾರರು ಮುಖ್ಯವಾಗಿ ಸದಾ ಮುಸ್ಲಿಮರಿಗೆ ಅನ್ಯಾಯ ವಾದಾಗ ಜೋರಾಗಿ ದ್ವನಿ ಎತ್ತುವ ಬುದ್ದಿ ಜೀವಿಗಳೆಣಿಸಿಕೊಂಡವರು ಇವರೆಲ್ಲರೂ ಈ ಕುರಿತು ದ್ವನಿ ಎತ್ತಬೇಕು ಮತ್ತು ಪ್ರತಿಭಟಿಸಬೇಕು.
ಮಾತ್ರವಲ್ಲ ಮುಸ್ಲಿಂ ಜನಪರ ಸಂಸ್ಥೆಯೊಂದು ಡಾ. ಎಂ ಮೋಹನ್ ಆಳ್ವ ರ ಸೌಹಾರ್ದತೆಯ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿದಾಗ, ಅದೇ ಆಳ್ವರು ಸಾವಿರಾರು ಮುಸ್ಲಿಮರನ್ನು ತನ್ನ ಕ್ಯಾಂಪಸ್ ನಲ್ಲಿ ಸೇರಿಸಿ ಇಪ್ತಾರ್ ಕೂಟ ಏರ್ಪಡಿಸಿದಾಗ ಮೋಹನ್ ಆಳ್ವ ರನ್ನು ಮುಸ್ಲಿಮರ ವಿರುದ್ದ ಎತ್ತಿ ಕಟ್ಟುವ, ಆಳ್ವ ರನ್ನು ತಮ್ಮ ಬರಹದಲ್ಲೇ ಕೋಮುವಾದಿ, ಮುಸ್ಲಿಮ್ ವಿರೋಧಿ ಎಂದು ಗೀಚುವ ಹಿಂದೂ ಸಮೂದಾಯದ ಆ ಲೇಖಕರು ಕೂಡ ಮೂಕ ಪ್ರಾಣಿಯನ್ನು ಅಮಾನವೀಯ ರೀತಿಯಲ್ಲಿ ಸಾಗಟ ಮಾಡುವ ಕ್ರತ್ಯ ವನ್ನು ಕೂಡ ಖಂಡಿಸಲೇ ಬೇಕು.
ಇನ್ನು ಕೆಲವು ಉಸ್ತಾದರು ಸಿನಿಮಾ ನೋಡೋದು, ನಾಟಕ ಆಡೋದು, ಸಂಗೀತ ಬಳಸಿ ಹಾಡು ಹಾಡೋದು ಎಲ್ಲವೂ ಹರಾಮ್ ಅಂತ ಪತ್ವ ಕೊಡುತ್ತಾರಲ್ಲ, ಅಂತ ಉಸ್ತಾದರು ಈ ರೀತಿ ಹಿಂಸಾತ್ಮಕವಾಗಿ ಸಾಗಟ ಮಾಡುವ ಗೋ ಮಾಂಸ ಸೇವಿಸೋದು ಕೂಡ ಹರಾಮ್ ಅಂತ ಪತ್ವ ಹೊರಡಿಸಲಿ. ಅನೈತಿಕ ಪೊಲೀಸ್ ಗಿರಿಯನ್ನು ಹೇಗೆ ನಾವು ವಿರೋಧಿಸುತ್ತೇವೆಯೋ ಅದೇ ರೀತಿ ಚಿತ್ರ ಹಿಂಸೆ ಯಿಂದ ದನ ಸಾಗಟ ಮಾಡೋದನ್ನು ನಾವು ವಿರೋಧಿಸಲೇ ಬೇಕು..
ಅದೇ ರೀತಿ ನಿನ್ನೆ ಮೂಡುಬಿದ್ರೆಯಲ್ಲಿ ದಾಖಲೆ ಸಹಿತ ಹಸು ಒಂದನ್ನು ಕ್ರತಕ ಗರ್ಭ ಧಾರಾಣೆ ಗೆ ಕೊಂಡೋಯ್ಯುವಾಗ ಅಕ್ರಮ ಗೋ ಸಾಗಟ ಹೆಸರಲ್ಲಿ ಹಿಂದೂ ಸಂಘಟನೆಗೆ ಸೇರಿದ ಹುಡುಗರು ಗಂಭೀರವಾಗಿ ಹಲ್ಲೆ ನಡೆಸಿದ್ದನ್ನು ಕೂಡ ಖಂಡಿಸುತ್ತೇನೆ.
ಇಸ್ಮಾಯಿಲ್ ಮೂಡುಶೆಡ್ಡೆ ಚಲನಚಿತ್ರ ನಿರ್ದೇಶಕರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.