ಇರ್ದೆ ಬೆಟ್ಟಂಪಾಡಿ (www.vknews.in) : ಕೊರಿಗಿಂಲ ಜಮಾಅತ್ ಕಮಿಟಿ ಹಾಗೂ ಮಿಶ್ಬಾಹುಲ್ ಹುದಾ ಮದ್ರಸ ಇದರ ವತಿಯಿಂದ ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಇದರ 100ನೇ ಸಾಪ್ಥಕ ದಿನಾಚರಣೆ ಕಾರ್ಯಕ್ರಮ ಕೊರಿಗಿಂಲ ಮದ್ರಸ ವಠಾರದಲ್ಲಿ.. ಪ್ರಸ್ತುತ ಕಾರ್ಯಕ್ರಮದಲ್ಲಿ ಕೊರಿಗಿಂಲ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಜ! ಮುಹಮ್ಮದ್ ಕುಂಇ್ ಹಾಜಿ ಅಧ್ಯಕ್ಷತೆ ವಹಿಸಿ ಧ್ವಜಾರೋಹಣಗೈದರು.
ನಂತರ ಸ್ಥಳೀಯ ಖತೀಬ್ ರಾದ ಅಯ್ಯುಬ್ ವಹಬಿ ಉಸ್ತಾದ್ ರವರು ಮಾತನಾಡಿ ಸಮಸ್ತ ಉಲಮಾಗಳು ಮುಸ್ಲಿಂ ಸಮುದಾಯಕ್ಕೆ ನೀಡಿದ ಕೊಡುಗೆ ಅಪಾರ ಇಸ್ಮಾಮಿನ ಆಚಾರ ವಿಚಾರ ವನ್ನು ಮುಸ್ಲಿಂ ಸಮಾಜಕ್ಕೆ ತಿಳಿಸಿಕೊಟ್ಟು ಉತ್ತಮ ಸಮಾಜವನ್ನು ನಿರ್ಮಾಣ ಮಾಡುದರಲ್ಲಿ ಸಮಸ್ತದ ಉಲಮಾಗಲ ಪಾತ್ರ ಮಹ್ವತರವಾಗಿದ್ದು ಎಂದು ಸಮಸ್ತ ಉಲಮಾಗಳನ್ನು ಸ್ಮರಿಸುತ್ತ ಹಾಗೂ 2026 ಪೆಬ್ರವರಿ ಯಲ್ಲಿ ಕಾಸರಗೋಡು ಕುನಿಯದಲ್ಲಿ ನಡೆಯುವ ಸಮಸ್ತದ 100 ನೇ ಅಂತರಾಷ್ಟೀಯ ಮಹಾ ಸಮ್ಮೇಳನವನ್ನು ಯಶಸ್ವುಗೊಳಿಸಿ. ಎಂದು ಶುಭಹಾರೈಸಿ ಸಂದೇಶ ಭಾಷಣ ಮಾಡಿದರು. ತದನಂತರ ಸ್ಥಳೀಯ ಮದ್ರಸದ ಮುಅಲ್ಲಿಂರಾದ ಸ್ವಾದಿಕ್ ಮುಸ್ಲಿಯಾರ್ ಎಂಪೆಕಲ್ಲ್ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಹಮೀದ್ ಪೈಝಿ ಸಮಸ್ತ ಕುರಿತು ಚುಟುಕಾಗಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ತದನಂತರ ಮದ್ರಸದಲ್ಲಿ ನಡೆದ ಸಮಸ್ತದ ಕ್ವಿಝ್ ಸ್ವರ್ದೆ ಮತ್ತು ಚಿತ್ರ ಕಲೆಯಲ್ಲಿ ಪ್ರಥಮ, ದ್ವೀತಿಯ, ತೃತೀಯ, ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಪ್ರೊತ್ಸಾಸಲಾಯಿತು ಕಾರ್ಯಕ್ರಮಕ್ಕೆ ಆಗಮಿಸಿದ ಕೊರಿಗಿಂಲ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಜ! ಮೂಸಕುಂಇ್ ಶಾಲೆ ಬಳಿ ಜಮಾಅತ್ ಕಮಿಟಿಯ ಪ್ರಧಾನ ಸದಸ್ಯರಾದ ಅನ್ವರ್ , ಜಮಾಅತ್ ಕಮಿಟಿಯ ಮಾಜಿ ಕಾರ್ಯದರ್ಶಿ ಅಬ್ದುಲ್ ಹಮೀದ್, ಅಶ್ರಫ್ ಕೊರಿಗಿಂಲರವರು ಉಪಸ್ಥಿತರಿದ್ದರು ಮತ್ತು ಸ್ಥಳೀಯ ಮದ್ರಸ SKSBV ಯ ವಿದ್ಯಾರ್ಥಿಗಳು ಎಲ್ಲರೂ ಪಾಲ್ಗೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಸ್ಥಳೀಯ ಮುಅಲ್ಲಿಂರಾದ ಆಬೂಬಕ್ಕರ್ ಮದನಿ ಉಸ್ತಾದ್ ಧನ್ಯವಾದ ಹೇಳಿ ಮೂರು ಸ್ವಲಾತ್ ದೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು. ಕಾರ್ಯಕ್ರಮಕ್ಕೆ ಬಂದ ಸಬಿಕರಿಗೆ ಹಾಗೂ ಮದ್ರಸ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಾಗೂ ಬಹುಮಾನ SKSSF ಕೊರಿಗಿಂಲ ಶಾಖೆಯಿಂದ ವಿತರಿಸಲಾಯಿತು…
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.