ಮಾಡನ್ನೂರು (www.vknews.in) ; ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳೀಯ ಮುಸ್ಲಿಮ್ ಸಮುದಾಯ ರಾಜಕೀಯ,ಧಾರ್ಮಿಕ,ಶೈಕ್ಷಣಿಕ ಹೀಗೇ ಎಲ್ಲಾ ಕ್ಷೇತ್ರಗಳಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದ್ದು ಅದಕ್ಕೆ ಅಲ್ಲಿನ ಉಲಮಾ ಮತ್ತು ಉಮರಾ ವರ್ಗದವರ ಸಂಘಟನಾ ಚತುರತೆ ಮತ್ತು ದೀರ್ಘ ದೃಷ್ಟಿತ್ವ ಹೊಂದಿದ ನಾಯಕತ್ವವೇ ಕಾರಣ. ಸರಿಯಾದ ದಿಸೆಯಲ್ಲಿರುವ ಪ್ರಬಲ ನಾಯಕತ್ವವು ಸಮುದಾಯವನ್ನು ಸಬಲೀಕರಿಸುವದಲ್ಲದೇ ಅನುಯಾಯಿಗಳು ದಾರಿ ತಪ್ಪದಂತೆಯೂ ನೋಡಿಕೊಳ್ಳುತ್ತದೆ.
ಈ ನಿಟ್ಟಿನಲ್ಲಿ ಕಾಸರಗೋಡಿನ ಕುನಿಯ ಎಂಬಲ್ಲಿ ತನ್ನ ನೂರನೇ ವಾರ್ಷಿಕೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಿರುವ ಜಗದ್ವಿಖ್ಯಾತ , ಪ್ರತಿಷ್ಠಿತ ಸಮಸ್ತ ಕೇರಳ ಜಂಹಿಯ್ಯತ್ತುಲ್ ಉಲಮಾ ಸಂಘಟನೆಯು ಇಡೀ ಜಗತ್ತಿಗೇ ಮಾದರಿಯಾಗಿದೆ ಎಂದು ಮಾಡನ್ನೂರು ಖತೀಬ್ ಎಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಹೇಳಿದ್ದಾರೆ.
ಕೋಮುವಾದ,ಭೀತಿವಾದ,ನೂತನವಾದಗಳ ಬಲೆಗೆ ಬೀಳದಂತೆ ಜನ ಸಾಮಾನ್ಯರನ್ನು ಹಿಡಿದಿಟ್ಟು ಪಾರಂಪರಿಕ ಸುನ್ನೀ ಸೂಫೀ ವಿಚಾರಧಾರೆಗಳ ಮೂಲಕ ಭಕ್ತಿ ಮಾರ್ಗದಲ್ಲಿ ಜನರನ್ನು ನೆಲೆಯೂರಿಸುವ ಮೂಲಕ ದೇಶದ ವಿವಿಧ ಜಾತಿ ಧರ್ಮೀಯರೆಡೆಯಲ್ಲಿ ಪರಸ್ಪರ ಶಾಂತಿ ಸೌಹಾರ್ದತೆಯನ್ನು ಕಾಪಾಡುವಲ್ಲಿ ಕೇರಳದ ಉಲಮಾ ಹಾಗೂ ಉಮರಾಗಳು ತೋರಿಸಿ ಕೊಟ್ಟ ಮಾದರಿಯನ್ನು ಇಡೀ ದೇಶದಲ್ಲಿ ಅಳವಡಿಸಿ ಕೊಂಡರೆ ಖಂಡಿತ ಅದು ಮುಸ್ಲಿಮ್ ಸಮುದಾಯಕ್ಕೆ ವರದಾನ ಆಗಬಹುದು ಎಂದು ಅಭಿಪ್ರಾಯ ಪಟ್ಟ ಖತೀಬರು ಸಮರ್ಥ ನಾಯಕತ್ವದಿಂದ ವಂಚಿತಗೊಂಡ ಯಾವುದೇ ಸಮುದಾಯವು ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದೇ ದಿಕ್ಕು ದೆಸೆ ಇಲ್ಲದ ಒಂದು ವಿಭಾಗವಾಗಿ ಮಾರ್ಪಾಡು ಹೊಂದುತ್ತದೆ ಎಂದರು.
ಇಂಡಿಯಾದ ಮುಸ್ಲಿಮ್ ಸಮುದಾಯಕ್ಕೆ ಇಡಿಯಾಗಿ ಒಂದು ಬಲವಾದ ನಾಯಕತ್ವ ಇಲ್ಲದೇ ಇರುವುದರಿಂದ ಅವರು ಹಲವು ರೀತಿಯ ಶೋಷಣೆ, ಧೂಷಣೆಗೆ ಒಳಗಾಗುತ್ತಿದ್ದಾರಲ್ಲದೇ ಸ್ವತಃ ತಮ್ಮ ಜವಾಬ್ಧಾರಿಯನ್ನು ನಿಭಾಯಿಸಲಾಗದೇ ಎಲ್ಲಾ ಕ್ಷೇತ್ರದಲ್ಲೂ ಅವಗಣನೆಗೆ ಒಳಗಾಗಿ ಗೊತ್ತು ಗುರಿ ಇಲ್ಲದವರಾಗಿ ಮಾರ್ಪಡುವಂತಾಗಿದೆ.
ಆದ್ದರಿಂದ ಕೇರಳದ ಮಾದರಿಯನ್ನು ಸ್ವೀಕರಿಸಿ ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ ನೀಡಬಲ್ಲ ಬಲಿಷ್ಟ ಸಂಘಟನೆಯೊಂದು ರಾಷ್ಟಮಟ್ಟದಲ್ಲೇ ಉದಯಿಸಿ ಕಾರ್ಯಚರಿಸ ಬೇಕಾದ ಅಗತ್ಯವಿದ್ದು ನಮ್ಮ ಜಿಲ್ಲೆಯಿಂದಲೇ ಇದಕ್ಕೆ ಶುಭಾರಂಭಗೊಳ್ಳಲಿ ಎಂಬ ಆಶಯ ವ್ಯಕ್ತಪಡಿಸಿದ ದಾರಿಮಿಯವರು ಕೇರಳದ ವಿವಿಧ ಸುನ್ನೀ ಸಂಘಟನೆಯ ನಾಯಕರ ಶ್ರಮ ಫಲದಿಂದಾಗಿ ಅಲ್ಲಿ ಉಂಟಾದ ಶ್ರೇಯಾಭಿವೃದ್ದಿಯನ್ನು ಕೊಂಡಾಡಿದರು.
ಕೇರಳದ ಹೊರತಾಗಿ ದೇಶದ ವಿವಿಧ ಭಾಗಗಲ್ಲಿ ಇಸ್ಲಾಂ ಧರ್ಮದ ಕನಿಷ್ಠ ಆಚಾರ ವಿಚಾರಗಳ ಕುರಿತಂತೆಯೇ ಖುದ್ದು ಮುಸ್ಲಿಮರೇ ಅಜ್ಞಾನಿಗಳಾಗಿರುವ ದುಸ್ಥಿತಿ ಇದ್ದು ಇದಕ್ಕೆ ವಿರುದ್ದವಾಗಿ ಸಂತ ಪುರುಷ ವರಕ್ಕಲ್ ಮುಲ್ಲಕೋಯ ತಂಙಳ್ ರಿಂದ ಸ್ಥಾಪಿತಗೊಂಡು ಕಣ್ಣಿಯತ್ ಉಸ್ತಾದ್ , ಶಂಸುಲ್ ಉಲಮಾ,ಪಾಣಕಾಡ್ ಸಾದಾತುಗಳ ಮೂಲಕ ಇಂದು ಸಯ್ಯಿದುಲ್ ಉಲಮಾ ಜಿಪ್ರಿ ತಂಙಳ ನೇತೃತ್ವದಲ್ಲಿ ಬೆಳೆದು ಹೆಮ್ಮರವಾಗಿ ನಿಂತಿರುವ “ಸಮಸ್ತ” ಸಂಘಟನೆಯಿಂದಾಗಿ ಕೇರಳದಂತೆಯೇ ನಮ್ಮ ಜಿಲ್ಲೆಯಲ್ಲೂ ಒಂದಿಷ್ಟು ಸುಧಾರಣೆ ಕಂಡಿದ್ದು ಇದಕ್ಕೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎಂದು ನುಡಿದರು.
ಮುಂದುವರೆದು ಮಾತಾಡಿದ ದಾರಿಮಿಯವರು ನಾಲ್ಕೈದು ಮಂದಿಗಳಿರುವ ಕುಟುಂಬವೊಂದರಲ್ಲೇ ಅಭಿಪ್ರಾಯ ಕ್ರೋಡೀಕರಣ ಸಾಧ್ಯವಿಲ್ಲದಿರುವಾಗ ಅಂತದರಲ್ಲಿ ಲಕ್ಷಾಂತರ ಜನ ಅನುಯಾಯಿಗಳಿರುವ ಸಂಘಟನೆಗಳಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸಹಜವಾಗಿದ್ದು ಅದನ್ನು ಮೀರಿ ಒಳಿತಿಗಾಗಿ ಪರಸ್ಪರ ಕೈಜೋಡಿಸಿ ಮುಂದುವರೆದು ಸಮಸ್ತದಂತಹ ಸಂಘಟನೆಗಳನ್ನು ಬಲಪಡಿಸುವುದು ಅನಿವಾರ್ಯವಾಗಿದೆ ಎಂದರು.
✍️ ಝಹ್ರಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.