(www.vknews.in) : ಅಲ್ಲಾಹನ ಹಬೀಬ್ ಮುಹಮ್ಮದ್(ಸ) ರು ಉಪವಾಸ ತೊರೆದದ್ದು ಖರ್ಜೂರದಿಂದಾಗಿದೆ ಎಂದು ಹದೀಸಿನಲ್ಲಿದೆ. كَانَ رَسُولُ اللَّهِ ﷺ يُفْطِرُ عَلَى رُطَبَاتٍ قَبْلَ أَنْ يُصَلِّيَ، فَإِنْ لَمْ تَكُنْ رُطَبَاتٌ فَعَلَى تَمَرَاتٍ، فَإِنْ لَمْ تَكُنْ حَسَا حَسَوَاتٍ مِنْ مَاءٍ (ಪ್ರವಾದಿ(ಸ) ಹಸಿ ಖರ್ಜುರದಿಂದ ಉಪವಾಸ ತೊರೆಯುತ್ತಿದ್ದರು ಎಂದು ಅಬೂದಾವೂದ್ ವರದಿ ಮಾಡಿದ ಹದೀಸಿನಲ್ಲಿದೆ.)
ಖರ್ಜೂರ ಉಷ್ಣವಾಗಿದ್ದು,ಅರಬಿಯಾದಲ್ಲಿ ಜನಿಸಿದ ರಸೂಲರು ಅರಬೀ ಮರಳುಗಾಡು ಉಷ್ಣದಿಂದ ಕೂಡಿದ್ದು ,ಆದರೂ ಉಷ್ಣವಲಯ ಊರಿನಲ್ಲಿ ಉಷ್ಣ ಆಹಾರ ತಿನ್ನಲು ಹೇಳಿದ್ದು ಯಾಕಾಗಿರಬಹುದೆಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ.
ಆಯುರ್ವೇದ ಶಾಸ್ತ್ರದಲ್ಲಿ ”ಉಷ್ಣಂ ಉಷ್ಣೇನ ಶಾಮ್ಯತಿ, ವಿಷಂ ವಿಷೇಣ ಹನ್ಯತೇ” ಎಂಬ ಮಾತು ಕಾಣಬಹುದು. ಆಯುರ್ವೇದದ ಪಿತಾಮಹರೆಂದು ಕರೆಯಲ್ಪಡುವ ಚರಕ ಮಹರ್ಷಿಗಳು ತಮ್ಮ ‘ಚರಕ ಸಂಹಿತೆ’ಯಲ್ಲಿ ಚಿಕಿತ್ಸಾ ಕ್ರಮಗಳ ಬಗ್ಗೆ ವಿವರಿಸುವಾಗ ಈ ತತ್ವವನ್ನು ಪ್ರಸ್ತಾಪಿಸಿದ್ದಾರೆ. ಅತಿಯಾದ ಉಷ್ಣದ ಕಾಯಿಲೆಗೆ ಉಷ್ಣ ಗುಣವುಳ್ಳ ಔಷಧವನ್ನೇ ನೀಡುವ ಕ್ರಮವನ್ನು (Similia Similibus Curentur) (ಸಮಾನವಾದುದು ಸಮಾನವಾದುದನ್ನು ಗುಣಪಡಿಸುತ್ತದೆ.) ಎಂದು ಆಯುರ್ವೇದ ಹೇಳುತ್ತದೆ.ಪ್ರವಾದಿಯವರು(ಸ) ಹೇಳಿದುದರ ತಾತ್ಪರ್ಯ ಇದರಿಂದ ಮನಗಾಣಬಹುದು.
ಇನ್ನು ಇದರಲ್ಲಿ ಅಡಕವಾಗಿರುವ ವೈಜ್ಞಾನಿಕ ಮಾಹಿತಿಯನ್ನು ನಾವು ಅರಿಯಬೇಕಿದೆ.
ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆಗಳು, ಫೈಬರ್ ಮತ್ತು ಪೊಟ್ಯಾಸಿಯಮ್ನಂತಹ ಅಗತ್ಯ ಖನಿಜಗಳ ಸುಲಭವಾಗಿ ಲಭ್ಯವಿರುತ್ತದೆ, ಇದು ದೀರ್ಘ ದಿನದ ಉಪವಾಸದ ನಂತರ ದೇಹವನ್ನು ಮರುಪೂರಣಗೊಳಿಸಲು ಸಹಾಯ ಮಾಡುತ್ತದೆ.ಖಾಲಿ ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುವ ಸಮಯದಲ್ಲಿ ಶಾಂತ ಮತ್ತು ತ್ವರಿತ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ.
ಖರ್ಜೂರದಲ್ಲಿ ಫೈಬರ್, ನೈಸರ್ಗಿಕ ಸಕ್ಕರೆಗಳು, ಪೊಟ್ಯಾಸಿಯಮ್ ಮತ್ತು ಇತರ ವಿಟಮಿನ್ಗಳು ಅಧಿಕವಾಗಿದ್ದು, ಉಪವಾಸದ ಸಮಯದಲ್ಲಿ ಸಂಭವಿಸಬಹುದಾದ ಕಡಿಮೆ ರಕ್ತದ ಸಕ್ಕರೆ ಮಟ್ಟವನ್ನು ಎದುರಿಸಲು ಸಹಾಯ ಮಾಡುತ್ತದೆ.ಉಪವಾಸ ಸಮಯದಲ್ಲಿ ನಮ್ಮ ದೇಹವು ಬೆಳಗ್ಗಿನ ಸಮಯದಲ್ಲಿ ಅಧಿಕವಾಗಿ ಖಾಲಿಹೊಟ್ಟೆಯಲ್ಲಿರುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿರುತ್ತದೆ. ಈ ಸಮಯದಲ್ಲಿ ನಾವು ಖರ್ಜೂರದಿಂದ ಉಪವಾಸ ತೊರೆದರೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಮತೋಲನ ಪಡಿಸಲು ಇದು ಪರಿಣಾಮಕಾರಿ. ಮಾತ್ರವಲ್ಲ ಹೃದಯಕ್ಕೂ ರಕ್ತದೊತ್ತಡದ ಸಮಸ್ಯೆಯನ್ನು ಖರ್ಜೂರ ನಿಯಂತ್ರಿಸಬಲ್ಲದು.
ಖರ್ಜೂರದ ನೈಸರ್ಗಿಕ ಮಾಧುರ್ಯವು ಉಪವಾಸವನ್ನು ಮುರಿದ ನಂತರ ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ.ಇದರಿಂದ ಹೊಟ್ಟೆನೋವಿನಂತಹ ಸಂಗತಿಗಳು ಬರುವುದು ಕಡಿಮೆ.
ಖರ್ಜೂರದಿಂದ ಹತ್ತು ಹಲವು ಪ್ರಯೋಜನಗಳಿದ್ದು ಸತ್ಯ ವಿಶ್ವಾಸಿಯು ವಿಜ್ಞಾನದ ಪ್ರಯೋಜನಗಳಿಗಿಂತ ಮೊದಲನೆಯದಾಗಿ ಮುಹಮ್ಮದ್ (ಸ) ಕಲಿಸಿದ ಚರ್ಯೆಯಾದುದರಿಂದ ಪ್ರವಾದಿ ಚರ್ಯೆಗೆ ಪ್ರಾಧಾನ್ಯ ನೀಡಬೇಕು.
✍️ ಕೆ.ಎಚ್.ಇಕ್ಬಾಲ್ ನಿಝಾಮಿ ಕಿತ್ತಲೆಗಂಡಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.