ಟೆಹ್ರಾನ್ (www.vknews.in) : ಅಮೆರಿಕ ಮತ್ತು ಇರಾನ್ ನಡುವೆ ಸಂಧಾನವಾಗಿ ಯುದ್ಧ ನಿಲ್ಲುತ್ತೆ, ಜಗತ್ತು ಶಾಂತಿಯಾಗುತ್ತೆ ಅಂತ ಕೋಟ್ಯಂತರ ಜನರು ಕನಸು ಕಂಡಿದ್ದರು. ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ನಡೆದ 21 ಗಂಟೆಗಳ ಮಾತುಕತೆ ವಿಫಲವಾಯಿತು. ಈ ಬೆಳವಣಿಯ ಕೆಲ ಗಂಟೆಗಳ ನಂತರ ಇರಾನ್ ಮೊದಲ ಪ್ರತಿಕ್ರಿಯೆ ನೀಡಿದ್ದು, ಮಾತುಕತೆ ವಿಫಲವಾಗಲು ಇಸ್ರೇಲ್ ಪ್ರಧಾನಿ ಕಾರಣ ಎಂದು ಇರಾನ್ ಹೊಸ ಬಾಂಬ್ ಸಿಡಿಸಿದೆ.
ಅಮೆರಿಕ – ಇರಾನ್ ಮಾತುಕತೆಗಳ ಮಧ್ಯೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ಗೆ ಫೋನ್ ಕಾಲ್ ಮಾಡಿದ್ದರು. ಆ ಫೋನ್ ಕಾಲ್ ಬಳಿಕ ಮಾತುಕತೆ ಹಳಿತತಪ್ಪಿತು, ಅಮೆರಿಕ ಬಿಕ್ಕಟ್ಟಿನಲ್ಲಿ ಕಾಣುತ್ತಿದ್ದ ಪ್ರಗತಿಯನ್ನ ಹಾಳುಮಾಡಿತು ಎಂದು ಇರಾನ್ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ಯುದ್ಧದ ಮೂಲಕ ಸಾಧಿಸಲು ಸಾಧ್ಯವಾಗದ್ದನ್ನ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಅಮೆರಿಕ ಪ್ರಯತ್ನಿಸಿತ್ತು. ಆದ್ರೆ ಸಭೆ ನಡೆಯುತ್ತಿದ್ದಾಗ ನೆತನ್ಯಾಹು, ವ್ಯಾನ್ಸ್ಗೆ ಕರೆ ಮಾಡಿ, ಅಮೆರಿಕ-ಇರಾನ್ ಮಾತುಕತೆಗಳಿಂದ ಗಮನವನ್ನ ಇಸ್ರೇಲ್ ಹಿತಾಸಕ್ತಿಗಳತ್ತ ಸೆಳೆದರು. ಇದು ಒಪ್ಪಂದವನ್ನು ಹಾಳುಮಾಡಿತು ಎಂದು ದೂರಿದ್ದಾರೆ.
ವ್ಯಾನ್ಸ್ ಇಸ್ಲಾಮಾಬಾದ್ನಿಂದ ನಿರ್ಗಮಿಸುವುದಕ್ಕೂ ಮುನ್ನ ನಡೆಸಿದ್ದ ಸುದ್ದಿಗೋಷ್ಠಿ ಅನಗತ್ಯವಾಗಿತ್ತು ಎಂದ ಅರಾಘ್ಚಿ, ಇರಾನ್ ತನ್ನ ರಾಷ್ಟ್ರದ ಹಿತಾಸಕ್ತಿ ಮತ್ತು ಸಾರ್ವಭೌಮತ್ವ ಕಾಪಾಡಲು ಸಿದ್ಧ ಮತ್ತು ಬದ್ಧವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.