(www.vknews.in): SSLC CBSE ಫಲಿತಾಂಶ ಪ್ರಕಟಗೊಂಡಿದ್ದು, ಸೌದಿ ಅರೇಬಿಯಾದ ರಿಯಾದ್ನಲ್ಲಿರುವ ಅಲಿಫ್ ಇಂಟರ್ನ್ಯಾಷನಲ್ ಸ್ಕೂಲ್ನ ವಿದ್ಯಾರ್ಥಿನಿಗಳಾದ ಲಿಫಾ ಮರಿಯಮ್ ಹಾಗೂ ಲಿಯಾ ಖತೀಜಾ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಲಿಫಾ ಮರಿಯಮ್ 466/500 (93.2%) ಅಂಕಗಳು ಹಾಗೂ ಲಿಯಾ ಖತೀಜಾ 470/500 (94%) ಅಂಕಗಳೊಂದಿಗೆ ಉತ್ತಮ ಸಾಧನೆ ಮಾಡಿ ತೇರ್ಗಡೆಯಾಗಿದ್ದಾರೆ.
ಶಬೀರ್ ಕೆಸಿ ರೋಡ್ ಹಾಗೂ ಸಾಜಿದಾ ಉಳ್ಳಾಲ ಅವರ ಅವಳಿ ಪುತ್ರಿಯರಾದ ಇವರು, ಉತ್ತಮ ಅಂಕಗಳನ್ನು ಗಳಿಸಿ ಸಾಧನೆಗೈದು, ಕುಟುಂಬಕ್ಕೆ, ಶಾಲೆಗೆ ಹಾಗೂ ಊರಿಗೆ ಕೀರ್ತಿಯನ್ನು ತಂದಿದ್ದಾರೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂಬುದು ಎಲ್ಲರ ಹಾರೈಕೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.