ಕೋಟೆಕಾರ್ (www.vknews.in): ಹಿದಾಯತ್ ನಗರ ಹುಸೈನಿಯಾ ದಅವಾ ದರ್ಸ್ ಆರಂಭೋತ್ಸವವು ಏಪ್ರಿಲ್ 17 ಶುಕ್ರವಾರ ಜುಮಾ ನಮಾಝ್ ಬಳಿಕ ಮಸೀದಿಯಲ್ಲಿ ಆರಂಭಗೊಂಡಿತು. ಬಹು ಕೆ.ಪಿ. ಹುಸೈನ್ ಸಅದಿ ಕೆ.ಸಿ. ರೋಡ್ ದರ್ಸ್ಗೆ ಚಾಲನೆ ನೀಡಿ, ದರ್ಸ್ ಕಲಿಕೆಯ ಮಹತ್ವದ ಕುರಿತು ವಿವರಿಸಿದರು.
ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ದುವಾ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಸೀದಿ ಉಪಾಧ್ಯಕ್ಷ ಕೆ.ಎಂ. ಅಬ್ದುಲ್ ಕಾದರ್, ಮುಹಧ್ಸಿನ್ ಶಕೂರ್ ಸಅದಿ, ಮುಅಲ್ಲಿಂ ಫಾರೂಕ್ ಸಅದಿ ಕೊಮರಂಗಳ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿ.ಎಚ್. ಕಾರ್ಯಕ್ರಮವನ್ನು ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.