ಬಿ.ಸಿ.ರೋಡು (www.vknews.in): ಮಿತ್ತಬೈಲ್ನ ದಾರುಲ್ ಉಲೂಮ್ ಮಹಿಳಾ ಶರೀಯತ್ ಕಾಲೇಜಿನಲ್ಲಿ ಶರೀಯತ್ ಶಿಕ್ಷಣದ ಜೊತೆಗೆ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಅಲ್ಲದೆ, ಪದವಿ ಶಿಕ್ಷಣದಲ್ಲಿಯೂ ಉತ್ತಮ ಅಂಕಗಳನ್ನು ಪಡೆದು ತಮ್ಮ ಸೆಮಿಸ್ಟರ್ಗಳನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದಾರೆ.
ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಪಡೆಯಲು ಈ ಕಾಲೇಜು ವಿದ್ಯಾರ್ಥಿನಿಯರಿಗೆ ಉತ್ತಮ ಆಯ್ಕೆಯಾಗಿದೆ. ಇಲ್ಲಿ ಕಲಿತ ಬಹಳಷ್ಟು ವಿದ್ಯಾರ್ಥಿನಿಯರು ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅಲ್ಲದೆ, ಕೆಲ ತಿಂಗಳುಗಳ ಹಿಂದೆ ಕೈಬರಹದಲ್ಲಿ ಕುರ್ಆನ್ ಬರೆದ ವಿದ್ಯಾರ್ಥಿನಿಯೂ ಇದೇ ಕಾಲೇಜಿನವಳು ಎಂಬುದು ಹೆಮ್ಮೆಯ ಸಂಗತಿ. ಎಸ್ಎಸ್ಎಲ್ಸಿ ನಂತರ ನಿಮ್ಮ ಮಕ್ಕಳನ್ನು ಇಲ್ಲಿ ಸೇರಿಸಿದರೆ, ಎರಡೂ ವಿಧದ ಶಿಕ್ಷಣವನ್ನು ಪಡೆಯಲು ಅವಕಾಶವಿದೆ. ಅನುಭವ ಹೊಂದಿದ ಶಿಕ್ಷಕರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕೈಬರಹದಲ್ಲಿ ಕುರ್ಆನ್ ಬರೆದ ಫಾತಿಮಾ ಅಬೀರ ಸೇರಿದಂತೆ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ಒಟ್ಟು ಏಳು ಮಂದಿ ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಪಡೆದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.