ಬೆಂಗಳೂರು (www.vknews.in) : ಮಹಿಳಾ ಸವಾರರ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್ನಲ್ಲಿ ಮೊದಲ ಬಾರಿಗೆ ಮಾಡೆಲ್ಗಳು ಹೆಲ್ಮೆಟ್ ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು.
ಭಾರತದ ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೊದಲ ಹೆಲ್ಮೆಟ್ ಬ್ರ್ಯಾಂಡ್ ಟ್ವಾರ್ರಾ (Tvarra Helmets), ಜೂನ್ 26 ಮತ್ತು 27ರಂದು ರಾಜಾಜಿನಗರದ ಶೆರಟನ್ ಗ್ರ್ಯಾಂಡ್ನಲ್ಲಿ ನಡೆದ 13ನೇ ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್ನಲ್ಲಿ ತನ್ನ ವಿಶೇಷ ಸಂಗ್ರಹವನ್ನು ಅನಾವರಣಗೊಳಿಸಿತು.
ವಿಶ್ವಪ್ರಸಿದ್ಧ ಫ್ಯಾಷನ್ ಡಿಸೈನರ್ ಹೌಸ್ ಆಫ್ ಪಂಕಜ್ ಸೋನಿ ಅವರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಮೊದಲ ಬಾರಿಗೆ ಮಾಡೆಲ್ಗಳು ಹೆಲ್ಮೆಟ್ ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುವ ಮೂಲಕ “ರಸ್ತೆ ಸುರಕ್ಷತೆಯೂ ಫ್ಯಾಷನ್ನ ಭಾಗವಾಗಬಹುದು” ಎಂಬ ಸಂದೇಶವನ್ನು ಸಾರಿದರು.
ಈ ಕುರಿತು ಮಾತನಾಡಿದ ಟ್ವಾರ್ರಾ ಸಂಸ್ಥಾಪಕಿ ಹಾಗೂ ಸಿಇಒ ಅಲ್ಪನಾ ಪರಿದಾ, “ಮಹಿಳೆಯರಿಗಾಗಿ ವಿನ್ಯಾಸಗೊಳಿಸಿರುವ ನಮ್ಮ ಹೆಲ್ಮೆಟ್ಗಳು ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಪಾಲಿಸುವುದರ ಜೊತೆಗೆ ಆಕರ್ಷಕ ವಿನ್ಯಾಸ ಮತ್ತು ಶೈಲಿಯನ್ನು ಹೊಂದಿವೆ. ಸುರಕ್ಷತೆಯೂ ಫ್ಯಾಷನ್ನಷ್ಟೇ ಆಕರ್ಷಕವಾಗಿರಬಹುದು ಎಂಬುದನ್ನು ಈ ವೇದಿಕೆಯ ಮೂಲಕ ತೋರಿಸಲು ಸಾಧ್ಯವಾಗಿದೆ” ಎಂದು ಹೇಳಿದರು.
ಟ್ವಾರ್ರಾ ಹೆಲ್ಮೆಟ್ಗಳು ಮಹಿಳೆಯರ ತಲೆಯ ಆಕಾರ ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕಿವಿಯೋಲೆ ಧರಿಸುವ ಮಹಿಳೆಯರಿಗೆ ಅನುಕೂಲವಾಗುವ ವಿನ್ಯಾಸ, ಹಗುರವಾದ ವಸ್ತುಗಳು, ಆಪ್ಟಿಕಲ್ ಗ್ರೇಡ್ ವೈಸರ್ ಹಾಗೂ ಆರಾಮದಾಯಕ ಸ್ಟ್ರ್ಯಾಪ್ಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿವೆ.
ಈ ಹೆಲ್ಮೆಟ್ಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನಿಗದಿಪಡಿಸಿರುವ ಸುರಕ್ಷತಾ ಮಾನದಂಡಗಳನ್ನು ಪೂರೈಸಿದ್ದು, ಕಡ್ಡಾಯ ISI (IS 4151) ಪ್ರಮಾಣೀಕರಣವನ್ನು ಹೊಂದಿವೆ. ಜೊತೆಗೆ ಅಮೆರಿಕದ DOT ಸುರಕ್ಷತಾ ಮಾನದಂಡಗಳಿಗೂ ಅನುಗುಣವಾಗಿವೆ.
ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ಹೆಲ್ಮೆಟ್ಗೂ ವಿವಿಧ ಕಠಿಣ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸುರಕ್ಷತೆ, ಆರಾಮ ಮತ್ತು ಆಧುನಿಕ ವಿನ್ಯಾಸದ ಸಮನ್ವಯವೇ ಟ್ವಾರ್ರಾ ಹೆಲ್ಮೆಟ್ಗಳ ವಿಶೇಷತೆ.
ಟ್ವಾರ್ರಾ ಬಗ್ಗೆ..
ಟ್ವಾರ್ರಾ ಭಾರತದಲ್ಲಿ ಮಹಿಳಾ ಸವಾರರಿಗಾಗಿ ರೂಪುಗೊಂಡ ಮೊದಲ ಹೆಲ್ಮೆಟ್ ಬ್ರ್ಯಾಂಡ್ ಆಗಿದ್ದು, ಸುರಕ್ಷತೆ, ಗುಣಮಟ್ಟ, ಆರಾಮ ಮತ್ತು ಆಧುನಿಕ ವಿನ್ಯಾಸವನ್ನು ಒಂದೇ ಉತ್ಪನ್ನದಲ್ಲಿ ಒದಗಿಸುವ ಗುರಿಯನ್ನು ಹೊಂದಿದೆ. ಬ್ರ್ಯಾಂಡ್ ತಜ್ಞೆ ಹಾಗೂ ಉದ್ಯಮಿ ಅಲ್ಪನಾ ಪರಿದಾ ಅವರ ಪರಿಕಲ್ಪನೆಯಾದ ಈ ಸಂಸ್ಥೆ, ಮಹಿಳೆಯರ ಸುರಕ್ಷತೆಯನ್ನು ಹೊಸ ಆಯಾಮದಲ್ಲಿ ಪರಿಚಯಿಸುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.