ಮಸ್ಕತ್ (www.vknews.in) : ಒಮಾನ್ನ ರುಸೈಲ್ ಪ್ರದೇಶದಲ್ಲಿ ಕಟ್ಟಡದ ಕಿಟಕಿಯಿಂದ ಬಿದ್ದು ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತ ಬಾಲಕಿಯನ್ನು ತ್ರಿಶೂರ್ ಮೂಲದ ಪ್ರದೀಪ್ ಮತ್ತು ದಿವ್ಯಾ ದಂಪತಿಯ ಪುತ್ರಿ ದಕ್ಷಾ ಪ್ರದೀಪ್ (4) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ಪ್ರದೀಪ್ ಅವರು ರುಸೈಲ್ನಲ್ಲಿರುವ ಸೂಪರ್ಮಾರ್ಕೆಟ್ನಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ದಿವ್ಯಾ ಹಾಗೂ ಮಗಳು ದಕ್ಷಾ ಭೇಟಿ ವೀಸಾದಲ್ಲಿ ಒಮಾನ್ಗೆ ಆಗಮಿಸಿದ್ದರು. ತಾಯಿ ಸ್ವಲ್ಪ ಸಮಯ ಬೇರೆಡೆಗೆ ತೆರಳಿದ್ದ ವೇಳೆ ಮಗು ಕಿಟಕಿಯಿಂದ ಕೆಳಗೆ ಬಿದ್ದಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಒಮಾನ್ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು, ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮೃತದೇಹವನ್ನು ಕೇರಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಸ್ಕತ್ ಕೆಎಂಸಿಸಿ ರುಸೈಲ್ ಏರಿಯಾ ಕೇರ್ ವಿಂಗ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.