ದುಬೈ (www.vknews.in) : ಯುಎಇಯ ಮಹತ್ವಾಕಾಂಕ್ಷೆಯ ಎತಿಹಾದ್ ರೈಲು ಯೋಜನೆಯಲ್ಲಿ ಮೊದಲ ಭಾರತೀಯ ಪ್ಯಾಸೆಂಜರ್ ರೈಲು ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಕೇರಳದ ಅಲಪ್ಪುಳ ಮೂಲದ ನಿಶಾದ್ (29) ಪಾತ್ರರಾಗಿದ್ದಾರೆ. 2014ರಲ್ಲಿ ಯುಎಇಗೆ ತೆರಳಿದ ನಿಶಾದ್, ಆರಂಭದಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡಿದ್ದರು. ಬಳಿಕ ಸುಗಂಧ ದ್ರವ್ಯ ಮಾರಾಟ, ಹಾಟ್ಡಾಗ್ ತಯಾರಿಕೆ ಮತ್ತು ಹೋಂ ಡೆಲಿವರಿ ಸೇರಿದಂತೆ ವಿವಿಧ ಉದ್ಯೋಗಗಳನ್ನು ಮಾಡುತ್ತಾ ಜೀವನ ಕಟ್ಟಿಕೊಂಡರು.
2017ರಲ್ಲಿ ಸಾರಿಗೆ ಕ್ಷೇತ್ರಕ್ಕೆ ಕಾಲಿಟ್ಟ ಅವರು, ಮೊನೊರೈಲ್, ಮೆಟ್ರೊ ಮತ್ತು ಟ್ರಾಮ್ ಕಾರ್ಯಾಚರಣೆಗಳಲ್ಲಿ ಅನುಭವ ಗಳಿಸಿದರು. ಕೋವಿಡ್ ಸಂಕಷ್ಟದ ನಡುವೆಯೂ ಹಿನ್ನಡೆಯಾಗದೆ ತಮ್ಮ ವೃತ್ತಿಜೀವನವನ್ನು ಮುಂದುವರಿಸಿದರು.
2023ರಲ್ಲಿ ಜಾಯೆದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ತಂಡಕ್ಕೆ ಸೇರಿದ್ದ ನಿಶಾದ್, ನಂತರ ಹಿರಿಯ ತಂಡದ ನಾಯಕರಾಗಿ ಬಡ್ತಿ ಪಡೆದರು. 2020ರಲ್ಲಿ ರೈಲು ಕ್ಯಾಪ್ಟನ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೂ ತಾಂತ್ರಿಕ ಕಾರಣದಿಂದ ಅವಕಾಶ ತಪ್ಪಿತ್ತು. ಆದರೆ ಮತ್ತೆ ಪ್ರಯತ್ನಿಸಿ, 2024ರಲ್ಲಿ ಎತಿಹಾದ್ ಹೈಸ್ಪೀಡ್ ಪ್ಯಾಸೆಂಜರ್ ರೈಲಿನ ಮೊದಲ ಭಾರತೀಯ ಕ್ಯಾಪ್ಟನ್ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಪ್ರಸ್ತುತ ಅವರು ತರಬೇತಿ ಕಾರ್ಯಾಚರಣೆ ತಂಡದ ನಾಯಕ, ಪ್ರಮುಖ ಬೋಧಕ ಹಾಗೂ ಮೌಲ್ಯಮಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿಶಾದ್ ಅವರ ಪತ್ನಿ ಹಿಬಾ ಗಫೂರ್ ಆಗಿದ್ದು, ಖಲೀಫಾ ಝಾಯೆದ್ ಎಂಬ ಮಗನಿದ್ದಾನೆ. ಅವರ ಸಹೋದರ ರಿನ್ಶಾದ್ ಕೂಡ ಎತಿಹಾದ್ ಸರಕು ರೈಲಿನಲ್ಲಿ ಲೋಕೋ ಪೈಲಟ್ ಆಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.