ನವದೆಹಲಿ (www.vknews.in) ; ಪ್ರಮುಖ ಆನ್ಲೈನ್ ಆಹಾರ ಹಾಗೂ ದಿನಸಿ ಪೂರೈಕೆ ವೇದಿಕೆಯಾದ ಸ್ವಿಗ್ಗಿ ಇನ್ಸ್ಟಾಮಾರ್ಟ್ಗೆ ಅವಧಿ ಮೀರಿದ, ಹಾಳಾದ, ಕೊಳೆತ ಹಾಗೂ ಕಲುಷಿತ ಆಹಾರ ಉತ್ಪನ್ನಗಳ ಪೂರೈಕೆ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) 9 ನೋಟಿಸ್ಗಳನ್ನು ಜಾರಿಗೊಳಿಸಿದೆ.
ಗ್ರಾಹಕರಿಂದ ಬಂದಿರುವ ದೂರುಗಳ ಪರಿಶೀಲನೆಯ ವೇಳೆ ಅವಧಿ ಮೀರಿದ, ಅಸುರಕ್ಷಿತ ಹಾಗೂ ಕಲುಷಿತ ಆಹಾರ ಉತ್ಪನ್ನಗಳನ್ನು ಪೂರೈಸಿರುವ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ಸ್ವಿಗ್ಗಿ ಇನ್ಸ್ಟಾಮಾರ್ಟ್ಗೆ ಸ್ಪಷ್ಟನೆ ನೀಡುವಂತೆ ನೋಟಿಸ್ ನೀಡಲಾಗಿದೆ ಎಂದು FSSAI ಪ್ರಕಟಣೆಯಲ್ಲಿ ತಿಳಿಸಿದೆ.
ಇದಲ್ಲದೆ, ಅನುಮೋದನೆ ಪಡೆಯದ ಬ್ರ್ಯಾಂಡ್ ಹೆಸರಿನ ಮೊಟ್ಟೆಗಳನ್ನು ಗ್ರಾಹಕರಿಗೆ ಪೂರೈಸಿರುವುದು ಹಾಗೂ ಪರವಾನಗಿ ಇಲ್ಲದ ಸಂಸ್ಥೆಗಳ ಉತ್ಪನ್ನಗಳನ್ನು ಮಾರಾಟ ಮಾಡಿರುವ ಆರೋಪಗಳ ಬಗ್ಗೆಯೂ ವಿವರಣೆ ಕೇಳಲಾಗಿದೆ. ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕುರಿತು ಸ್ವಿಗ್ಗಿ ಇನ್ಸ್ಟಾಮಾರ್ಟ್ನಿಂದ ಸ್ಪಷ್ಟನೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು FSSAI ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.