ನವದೆಹಲಿ (www.vknews.in): ಜಂತರ್ ಮಂತರ್ ಪ್ರತಿಭಟನೆ ವೇಳೆ ತಮ್ಮ ಹಾಗೂ ತಮ್ಮ ದಿವಂಗತ ತಾಯಿಯನ್ನು ನಿಂದಿಸಿದ ವಿದ್ಯಾರ್ಥಿಗಳನ್ನು ಕ್ಷಮಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಸಂದೇಶದ ಮೂಲಕ ಹೇಳಿರುವ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ತಮ್ಮ ಸಂದೇಶದಲ್ಲಿ, “ಕಾನೂನು ಕ್ರಮವೇ ಸಮಸ್ಯೆಗೆ ಪರಿಹಾರವಲ್ಲ. ದಾರಿತಪ್ಪಿದ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಅವರನ್ನು ಶಿಕ್ಷಿಸುವುದಕ್ಕಿಂತ ಕ್ಷಮಿಸಿ, ಸರಿದಾರಿಗೆ ತರಬೇಕು” ಎಂದು ಹೇಳಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಪ್ರತಿಕ್ರಿಯಿಸಿರುವ ಅಭಿಜಿತ್ ದೀಪ್ಕೆ, “ಸರ್, ಕೇವಲ ರೀಲ್ಸ್ನಲ್ಲಿ ಮಾತ್ರ ಕ್ಷಮಿಸುತ್ತೀರಾ? ಅಥವಾ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನೂ ಹಿಂಪಡೆಯುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನವೂ ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ನೋಯ್ಡಾದ ಹದಿಹರೆಯದ ಯುವತಿಯ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಕುರಿತು ಅಭಿಜಿತ್ ದೀಪ್ಕೆ ವಿಡಿಯೊ ಸಂದೇಶ ಹಂಚಿಕೊಂಡಿದ್ದರು.
ಆ ವಿಡಿಯೊದಲ್ಲಿ, “ಇಷ್ಟು ವರ್ಷಗಳಿಂದ ಮಹಿಳೆಯರ ವಿರುದ್ಧ ಅತ್ಯಂತ ಅವಹೇಳನಕಾರಿ ಭಾಷೆ ಬಳಸಿರುವ ಬಿಜೆಪಿ ಐಟಿ ಸೆಲ್ ಸದಸ್ಯರ ವಿರುದ್ಧವೂ ಇದೇ ರೀತಿಯ ಎಫ್ಐಆರ್ ದಾಖಲಿಸಲಾಗುತ್ತದೆಯೇ?” ಎಂದು ಪ್ರಧಾನಿ ಮೋದಿಗೆ ಪ್ರಶ್ನಿಸಿದ್ದರು. ಪ್ರಧಾನಿ ಮೋದಿ ಬಿಡುಗಡೆ ಮಾಡಿದ ಕ್ಷಮೆಯ ವಿಡಿಯೊ ಹಾಗೂ ಅದರ ಬಳಿಕ ಅಭಿಜಿತ್ ದೀಪ್ಕೆ ವ್ಯಕ್ತಪಡಿಸಿರುವ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
Will FIRs also be filed against the IT cell members who have abused women in the worst possible manner for all these years? pic.twitter.com/xaz26nmt0C — Abhijeet Dipke (@abhijeet_dipke) July 31, 2026
Will FIRs also be filed against the IT cell members who have abused women in the worst possible manner for all these years? pic.twitter.com/xaz26nmt0C
— Abhijeet Dipke (@abhijeet_dipke) July 31, 2026
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.