ದಮ್ಮಾಮ್(www.ones.in): ಸೌದಿ ಅರೇಬಿಯಾಕ್ಕೆ ಮಾರಕ ಮಾದಕ ವಸ್ತು ಮೆಥಾಂಫೆಟಮೈನ್ ಅನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲ್ಪಟ್ಟ ಭಾರತೀಯ ಪ್ರಜೆಯನ್ನು ಗಲ್ಲಿಗೇರಿಸಲಾಗಿದೆ. ಲವ್ಲಿ ರಾಣಾ ಎಂಬ ಭಾರತೀಯನ ಶಿಕ್ಷೆಯನ್ನು ದಮ್ಮಾಮ್ನಲ್ಲಿ ಜಾರಿಗೊಳಿಸಲಾಗಿದೆ ಎಂದು ಸೌದಿ ಆಂತರಿಕ ಸಚಿವಾಲಯ ಪ್ರಕಟಿಸಿದೆ. ಪ್ರಕರಣದಲ್ಲಿ ಎಲ್ಲಾ ಕಾನೂನು ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ಆರೋಪಿಯು ಸೌದಿಯಲ್ಲಿ ಲಾರಿ ಚಾಲಕನಾಗಿದ್ದು, ದುಬೈಯಿಂದ ಸಾಮಾಗ್ರಿಗಳ ಜೊತೆಗೆ ತನ್ನ ಲಾರಿಯಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿರುವಾಗ ಬಂಧನಕ್ಕೊಳಗಾಗಿದ್ದ.
ದೇಶದ ಭದ್ರತೆ ಮತ್ತು ಜನರ ಜೀವಕ್ಕೆ ಬೆದರಿಕೆಯೊಡ್ಡುವ ಅಪರಾಧಗಳನ್ನು ಮಾಡುವವರ ವಿರುದ್ಧ ಬಲವಾದ ಕ್ರಮ ಮುಂದುವರಿಯುತ್ತದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.