ಬಂಟ್ವಾಳ (www.vknews.in): ಬಂಟ್ವಾಳ ತಾಲೂಕಿನ ಕೊಡಂಗೆ ಬಿ.ಸಿ.ರೋಡ್ನಲ್ಲಿರುವ ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಪಿ.ಎಂ.ಶ್ರೀ ಶಾಲೆ ಕೊಡಂಗೆ ಇದರ ಎಸ್ಡಿಎಂಸಿ ಅಧ್ಯಕ್ಷರಾದ ಹೈದರ್ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಎಲ್ಕೆಜಿಯಿಂದ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆ ಕುರಿತು ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಪಿ.ಎಂ.ಶ್ರೀ ಶಾಲೆ ಕೊಡಂಗೆ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಪಿ.ಎ. ರಹೀಮ್ ಕೈಕಂಬ, ಅಧ್ಯಕ್ಷರಾದ ಲುಕ್ಮನ್ ಬಂಟ್ವಾಳ, ಅರಫಾ ಜುಮಾ ಮಸೀದಿ ಪರ್ಲಿಯ ಅಧ್ಯಕ್ಷರಾದ ಡಿ.ಪಿ. ಸಿದ್ದಿಕ್ ಹಾಜಿ, ಅಡ್ವಕೇಟ್ ನೌಷದ್ ಅನ್ಸಾರಿ, ಮುಹಿಯುದ್ದೀನ್ ಜುಮಾ ಮಸೀದಿ ಸದಸ್ಯರಾದ ಶಾಹುಲ್ ಹಮೀದ್ ಎಸ್.ಪಿ., ಪರ್ಲಿಯ ಎಜುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಇಬ್ರಾಹಿಂ ಕೊಡಂಗೆ, ಹುಸೇನ್, ಇಬ್ರಾಹಿಂ ಬೊಗೋಡಿ ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಎಸ್ಡಿಎಂಸಿ ಸದಸ್ಯರಾದ ಹನೀಫ್ ಪರ್ಲಿಯ, ಜಲೀಲ್, ವಿದ್ಯಾರ್ಥಿಗಳ ಪೋಷಕರು ಹಾಗೂ ಶಾಲೆಯ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸುಗುಣ ಅವರು ಅತಿಥಿಗಳು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು ಸ್ವಾಗತಿಸಿದರು. ಲವೀನಾ ನರ ಅವರು ವಂದಿಸಿದರು. ವಿದ್ಯಾರ್ಥಿಗಳ ಭಾಷಣ ಹಾಗೂ ಗಣ್ಯರ ಉಪಸ್ಥಿತಿಯೊಂದಿಗೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.