ಕೂಳೂರು (www.vknews.in) : ನೂರುಲ್ ಹುದಾ ಮದ್ರಸ ಮತ್ತು ಮಸ್ಜಿದ್ ಸಮಿತಿ, ಗುಡ್ಡೆಯಂಗಡಿ ಕೂಳೂರು ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷ ಖಾಲಿದ್, ಪ್ರಧಾನ ಕಾರ್ಯದರ್ಶಿ ಬುನಯ್ಯಾ, ಉಪಾಧ್ಯಕ್ಷ ಹಮೀದ್, ಕೇಂದ್ರ ಮಸೀದಿಯ ಪ್ರಧಾನ ಕಾರ್ಯದರ್ಶಿ ನಝೀರ್ (ಶಾನು) ಗುಡ್ಡೆಯಂಗಡಿ, ರಝಾಕ್, ಹಂಝ, ರಶೀದ್, ನಿಯಾಝ್, ಜಬ್ಬಾರ್ ಹಾಗೂ ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.
ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಸಖಾಫಿ ಸ್ವಾಗತ ಭಾಷಣ ಮಾಡಿದರು. ಮುಅಲ್ಲಿಂ ಕಬೀರ್ ಮಳ್ಹರಿ ಅವರು ಸ್ವಾತಂತ್ರ್ಯೋತ್ಸವದ ಮಹತ್ವ ಹಾಗೂ ದೇಶದ ಏಕತೆ, ಸೌಹಾರ್ದತೆ ಮತ್ತು ಜವಾಬ್ದಾರಿಯ ಕುರಿತು ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮದ್ರಸ ವಿದ್ಯಾರ್ಥಿಗಳು, ಜಮಾಅತ್ ಸದಸ್ಯರು ಹಾಗೂ ಸ್ಥಳೀಯರು ಭಾಗವಹಿಸಿ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಹಂಚಿಕೊಂಡರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.