ಬಂಟ್ವಾಳ (www.vknews.in) : ತಾಲೂಕಿನ ಪಾಣೆಮಂಗಳೂರು ನೆಹರುನಗರದ ಅಲ್ ಬದ್ರಿಯ ಮದ್ರಸ ಹಾಗೂ ಜುಮಾ ಮಸೀದಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮಗಳು ನಡೆಯಿತು. ಖತೀಬರಾದ ದಾವೂದ್ ಇಸ್ಮಾಯಿಲ್ ಫೈಝಿ ಅವರು ಸ್ವಾತಂತ್ರ್ಯದ ಮಹತ್ವ ಹಾಗೂ ಅದರ ಜವಾಬ್ದಾರಿಗಳ ಕುರಿತು ಸಂದೇಶ ನೀಡಿದರು. ಸದರ್ ಉಸ್ತಾದ್ ಅಬ್ದುಲ್ ರಶೀದ್ ಹನೀಫಿ ಅವರು ಸ್ವಾತಂತ್ರ್ಯ ದಿನದ ಪ್ರತಿಜ್ಞೆ ಬೋಧಿಸಿದರು.
ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಗಫೂರ್ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಾಜವನ್ನು ವ್ಯಸನಮುಕ್ತಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ವ್ಯಸನಮುಕ್ತ ಜಮಾಅತ್ ನಿರ್ಮಾಣಕ್ಕೆ ಕೈಜೋಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಹ ಅಧ್ಯಾಪಕರಾದ ಮುಸ್ತಫಾ ಫೈಝಿ, ಅಬ್ದುಲ್ ಕಾದರ್ ಮದನಿ, ಅಬ್ದುಲ್ ಮಜೀದ್ ಯಮಾನಿ ಹಾಗೂ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಕಮಿಟಿ ಸದಸ್ಯರು, ಊರಿನ ನಾಗರಿಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದೇಶದ ಸ್ವಾತಂತ್ರ್ಯವನ್ನು ಗೌರವಿಸುವುದರ ಜೊತೆಗೆ, ಯುವಜನರನ್ನು ವ್ಯಸನಗಳಿಂದ ದೂರವಿಟ್ಟು ಆರೋಗ್ಯಕರ, ಶಾಂತಿಯುತ ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಿಸುವ ಸಂಕಲ್ಪದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.