ಮೈಸೂರು/ಕೊಡಗು (www.vknews.in) : ನಾಡಿನ ಸಮಸ್ತ ಜನತೆಗೆ ‘ಮಾನವೀಯತೆ ಚಾರಿಟೇಬಲ್ ಟ್ರಸ್ಟ್’ ವತಿಯಿಂದ ಧನ-ಧಾನ್ಯ, ಐಶ್ವರ್ಯ ಹಾಗೂ ಸುಖ-ಶಾಂತಿ ನೀಡುವ ಪವಿತ್ರ ವರಮಹಾಲಕ್ಷ್ಮಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು.
ವರಮಹಾಲಕ್ಷ್ಮಿ ಎಂದರೆ ಕೇವಲ ಸಂಪತ್ತನ್ನು ಕರುಣಿಸುವ ದೇವಿಯಷ್ಟೇ ಅಲ್ಲ, ದಯೆ, ಕರುಣೆ ಮತ್ತು ಪರೋಪಕಾರದ ಸಂಕೇತ. ಪ್ರತಿಯೊಬ್ಬರ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುವಂತೆ, ಪ್ರತಿಯೊಬ್ಬರ ಮನದಲ್ಲಿ ‘ಮಾನವೀಯತೆ’ ನೆಲೆಸಬೇಕು ಎಂಬುದು ನಮ್ಮ ಆಶಯ.
ಜನತೆಗೆ ನಮ್ಮ ಸಂಸ್ಥೆಯ ಸಮಾಜಮುಖಿ ಸಂದೇಶ: ”ನೈಜ ಸಂಪತ್ತು ಎಂದರೆ ಕೇವಲ ಹಣ-ಆಸ್ತಿಯಲ್ಲ; ಕಷ್ಟದಲ್ಲಿರುವವರಿಗೆ ನೆರವಾಗುವ ಕರುಣಾಮಯಿ ಮನಸ್ಸು. ನಮ್ಮ ಗಳಿಕೆಯ ಒಂದು ಸಣ್ಣ ಭಾಗವನ್ನು ಸಮಾಜದ ಬಡವರ, ದೀನದಲಿತರ ಮತ್ತು ಸಂಕಷ್ಟದಲ್ಲಿರುವವರ ಹಿತಕ್ಕಾಗಿ ವಿನಿಯೋಗಿಸಿದಾಗ ಮಾತ್ರ ನಮ್ಮ ಜೀವನಕ್ಕೆ ಮತ್ತು ಆಚರಿಸುವ ಹಬ್ಬಗಳಿಗೆ ಸಾರ್ಥಕತೆ ಸಿಗುತ್ತದೆ.” ಸಮಾಜದಲ್ಲಿರುವ ಶೋಷಿತರು, ಆಸರೆ ಇಲ್ಲದವರು ಮತ್ತು ಬಡ ಕುಟುಂಬಗಳ ಮೊಗದಲ್ಲಿ ನಗು ತರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ಹಬ್ಬದ ಶುಭ ದಿನದಂದು ನಾವೆಲ್ಲರೂ ಪರಸ್ಪರ ಪ್ರೀತಿ, ಸೌಹಾರ್ದತೆ ಮತ್ತು ನೆರವಿನ ಹಸ್ತ ಚಾಚುವ ಶಪಥ ಮಾಡೋಣ.
ಶುಭ ಹಾರೈಸುವವರು: ಶಿವಕುಮಾರ್ ಹೂಟಗಳ್ಳಿ – ಸಂಸ್ಥಾಪಕ ಅಧ್ಯಕ್ಷರು, ಎನ್. ನಾಗೇಂದ್ರ – ಕಾರ್ಯದರ್ಶಿ, ಸೌಮ್ಯ ಶ್ರೀ ಏಳನೇ ಹೊಸ ಕೋಟೆ – ಖಜಾಂಚಿ ಹಾಗೂ ಕೊಡಗು ಉಸ್ತುವಾರಿ, ಮೊನಾಲಿಸಾ ಪಟ್ಟಡ– ವಕೀಲರು ಹಾಗೂ ಮುಖ್ಯಸ್ಥರು, ಕಾನೂನು ಘಟಕ ಮತ್ತು ಸಂಸ್ಥೆಯ ವಕೀಲರ ತಂಡ ಹಾಗೂ ‘ಮಾನವೀಯತೆ ಚಾರಿಟೇಬಲ್ ಟ್ರಸ್ಟ್’ ನ ಸಮಸ್ತ ಪದಾಧಿಕಾರಿಗಳು ಮತ್ತು ಸದಸ್ಯರು
✍️ ಶಿವಕುಮಾರ್ (ಹೂಟಗಳ್ಳಿ )
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.