ಪುತ್ತೂರು : ಅಡ್ವೊಕೇಟ್ ಅಬ್ದುಲ್ ಶಾಲಿಕ್ ಅವರ ನೂತನ ಕಚೇರಿ ಪುತ್ತೂರು ಕೆ. ಪಿ.ಕಾಂಪ್ಲೆಕ್ಸ್ ನ ಎರಡನೇ ಮಹಡಿಯಲ್ಲಿ ಉದ್ಘಾಟನೆಗೊಂಡಿತು.ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದ್ದು, ನ್ಯಾಯಕ್ಕಾಗಿ ಹೋರಾಡುವ ಕಕ್ಷಿದಾರರಿಗೆ ಸೂಕ್ತ ಕಾನೂನು ಮಾರ್ಗದರ್ಶನ ಮತ್ತು ನ್ಯಾಯ ದೊರಕಿಸಿಕೊಡುವಲ್ಲಿ ವಕೀಲರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಗಣ್ಯರನ್ನು ಸ್ವಾಗತಿಸಿ ಮಾತನಾಡಿದ ನೂತನ ಕಚೇರಿಯ ಮಾಲೀಕರಾದ ಅಡ್ವೊಕೇಟ್ ಅಬ್ದುಲ್ ಶಾಲಿಕ್ ಅವರು , ಸಾರ್ವಜನಿಕರಿಗೆ ನ್ಯಾಯಸಮ್ಮತ ಹಾಗೂ ಪರಿಣಾಮಕಾರಿ ಕಾನೂನು ಸೇವೆ ಒದಗಿಸುವುದು ತಮ್ಮ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ವಕೀಲರಾದ ಅಡ್ವೊಕೇಟ್ ಮೊಹಮ್ಮದ್ ಅನ್ಸಾರ್, ಮಾಜಿ ಸಂಸದರು ಹಾಗೂ ಯುನೈಟೆಡ್ ಜಸ್ಟಿಸ್ ಟ್ರಸ್ಟ್ ನ ಅಧ್ಯಕ್ಷ ಅಡ್ವೊಕೇಟ್ ಇಬ್ರಾಹಿಂ, ಮಂಗಳೂರು ಜಿಲ್ಲಾ ನ್ಯಾಯಾಲಯದ ಹಿರಿಯ ವಕೀಲರಾದ ಅಡ್ವೊಕೇಟ್ ಶ್ರೀಮತಿ ಕವಿತಾ ಮುರುಗೇಶ್, ಮಂಗಳೂರು ಲೋಕ ಅದಾಲತ್ ಪರ್ಮನೆಂಟ್ ಸದಸ್ಯ ರಾದ ಅಡ್ವೊಕೇಟ್ ಫಜುಲ್ ರಹೀಮ್, ಪುತ್ತೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಅಡ್ವೊಕೇಟ್ ಸಂತೋಷ್, ಮೈಸೂರು ಮಹಾರಾಣಿ ಮಹಿಳಾ ಕಾಲೇಜಿನ ಮಾಜಿ ಪ್ರಾಂಶುಪಾಲ ಹಾಗೂ ಜಾಂಯಿಟ್ ಡೈರೆಕ್ಟರ್ ಆಫ್ ಕಲಬುರ್ಗಿ ರೀಜನ್ ಡಾ. ಅಬ್ದುಲ್ ರಹೀಮಾನ್ ಮೊದಲಾದವರು ಶುಭ ಹಾರೈಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರು, ನ್ಯಾಯಾಂಗ ಕ್ಷೇತ್ರದ ಗಣ್ಯರು, ಸ್ನೇಹಿತರು, ಬಂಧುಗಳು, ಹಿತೈಷಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಅತಿಥಿಗಳಿಗೆ ಧನ್ಯವಾದ ಅರ್ಪಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.