(ವಿಶ್ವ ಕನ್ನಡಿಗ ನ್ಯೂಸ್) : ಆರ್ಸೆನಲ್ ಫುಟ್ಬಾಲ್ ಕ್ಲಬ್ ನ ಥಾಮಸ್ ಪಾರ್ಟಿ ಕೆಲವು ವಾರಗಳ ಮೊದಲು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು, ಅವರು ಇದೀಗ ತಮ್ಮ ಹೆಸರನ್ನು ಯಾಕೂಬ್ ಎಂದು ಬದಲಾಯಿಸಿದ್ದಾರೆ. ಘಾನಾದ ಆರ್ಸೆನಲ್ ಮಿಡ್ಫೀಲ್ಡರ್ ಆಗಿರುವ ಇವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ಹಲವಾರು ವಾರಗಳ ನಂತರ, ಸಾರಾ ಬೆಲ್ಲಾ ಎಂಬ ಮೊರೊಕನ್ ಮಹಿಳೆಯನ್ನು ಮದುವೆಯಾಗುವ ಮೊದಲು ತನ್ನ ಹೆಸರನ್ನು ಬದಲಾಯಿಸಿಕೊಂಡರು.
ಘಾನಾದ ಪ್ರಮುಖ ಪತ್ರಕರ್ತೆ ನಾನಾ ಅಬಾ ಅನಾಮೋಹ್ ಪೋಸ್ಟ್ ಮಾಡಿದ ವೀಡಿಯೊ ಕ್ಲಿಪ್ನಲ್ಲಿ 28 ವರ್ಷದ ಥಾಮಸ್ ಪಾರ್ಟಿ, “ನಾನು ಮುಸ್ಲಿಂನಾಗಿದ್ದೇನೆ, ನಾನು ಪ್ರೀತಿಸುವ ಹುಡುಗಿಯನ್ನು ಮದುವೆಯಾಗುತ್ತೇನೆ ಮತ್ತು ನನ್ನ ಕೆಲವು ಸ್ನೇಹಿತರು ನನ್ನನ್ನು ಬಿಟ್ಟು ಹೋಗುತ್ತಾರೆ ಎಂದು ನನಗೆ ತಿಳಿದಿದೆ ಆದರೆ ಯಾವುದೇ ತೊಂದರೆಯಿಲ್ಲ, ನಾನು ಬೆಳೆದಿದ್ದು ಮುಸ್ಲಿಮರೊಂದಿಗೆ, ಈಗ ನನ್ನ ಹೆಸರು ಯಾಕೂಬ್ ಎಂದು ಹೇಳುತ್ತಾರೆ.
View this post on Instagram A post shared by MUSLIM ATHLETES (@muslimathletes)
A post shared by MUSLIM ATHLETES (@muslimathletes)
ಮಾರ್ಚ್ 2022 ರಲ್ಲಿ, ಮುಸ್ಲಿಂ ಅಥ್ಲೀಟ್ಸ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟವಾದ ಪೋಸ್ಟ್ ನಲ್ಲಿ ಮುಸ್ಲಿಂ ಶೇಖ್ ಒಬ್ಬರ ಪಕ್ಕದಲ್ಲಿ ಥಾಮಸ್ ಪಾರ್ಟಿ ಪವಿತ್ರ ಕುರ್ಆನ್ ಅನ್ನು ಹಿಡಿದಿರುವ ನಗುತ್ತಿರುವ ಚಿತ್ರವೊಂದು ಪ್ರಕಟವಾಗಿತ್ತು, ಮತ್ತು ಅದರ ಮೇಲೆ “ಥಾಮಸ್ ಪಾರ್ಟಿ ಇಸ್ಲಾಂಗೆ ಮತಾಂತರಗೊಳ್ಳುತ್ತಿದ್ದಾರೆ, ದೇವರು ನನ್ನ ಸಹೋದರನನ್ನು ಆಶೀರ್ವದಿಸಲಿ ಎಂದು ಬರೆದಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.