ಜೆದ್ದಾ(www.vknews.in): 4 ವರ್ಷಗಳಿಂದ ಮೆಹ್ತಾಬ್ ಅಲಿ ಮುಬಾರಕ್ ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯವಾದ ಹಫರ್ ಅಲ್ ಬಾತೀನ್ ಎಂಬಲ್ಲಿ ಕುಟುಂಬದ ಭಾರ ಹೊತ್ತು ಮನೆ ಕೆಲಸಕ್ಕಾಗಿ ಗುಲ್ಬರ್ಗದ ಅಹ್ದವಾಡಿಯ ಪುಟ್ಟ ಗ್ರಾಮದಿಂದ ಕೆಲಸದ ನಿಮಿತ್ತ ಆಗಮಿಸಿದ್ದರು. ಅಕ್ಟೊಬರ್ 28 -2020 ರಂದು ಮುಂಜಾನೆ ಸರಿ ಸುಮಾರು 9 ಘಂಟೆಗೆ ಮರುಭೂಮಿಯಲ್ಲಿರುವ ಟೆಂಟ್ (ಕಿರು ಮನೆ)ಗೆ ಆಕಸ್ಮಿಕ ಬೆಂಕಿ ತಗುಲಿ ಮೆಹ್ತಾಬ್ ಅಲಿಯವರ ದೇಹ 90 ಶೇಕಡ ಬೆಂಕಿಗಾಹುತಿಯಾಗಿ ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಮೆಹ್ತಾಬ್ ಅಲಿಯವರ ಮನೆಯವರ ಕೋರಿಕೆಯ ಮೇರೆಗೆ SDPI (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯಾಧ್ಯಕ್ಷರ ಸಹಕಾರದೊಂದಿಗೆ ಸೌದಿ ಅರೇಬಿಯಾದ ಇಂಡಿಯನ್ ಸೋಶಿಯಲ್ ಫಾರಂ (ಐ ಎಸ್ ಎಫ್) ಹಫರ್ ಅಲ್ ಬಾತಿನ್ – ಜುಬೈಲ್. ಸಂಸ್ಥೆಯು ನಿರಂತರ 48 ದಿನಗಳ ಕಾರ್ಯಾಚರಣೆಯ ಮುಖಾಂತರ 16/12/2020 ಮಧ್ಯಾಹ್ನ ಅಂತಿಮ ಸಂಸ್ಕಾರವು ಹಫರ್ ಅಲ್ ಬಾತಿನ್ ನಲ್ಲಿ ನಡೆಸಲಾಯಿತು. ಇಂಡಿಯನ್ ಸೋಶಿಯಲ್ ಫಾರಮ್ ಪದಾಧಿಕಾರಿಗಳಾದ ಇರ್ಶಾದ್ ಉಚ್ಚಿಲ ಹಫರ್ ಅಲ್ ಬಾತಿನ್, ನೌಶಾದ್ ಕೊಲ್ಲಂ, ನಝೀರ್ ತುಂಬೆ, ಫಿರೋಜ್ ಕಲ್ಲಡ್ಕ, ಝುಲ್ಕರ್ ಸುರತ್ಕಲ್, ಅಶ್ರಫ್ ಉಳ್ಳಾಲ, ನೌಫಲ್ ಬಂದರ್, ನೌಶಾದ್ ಕಾಟಿಪಳ್ಳ, ಸಹಕರಿಸಿದರು. ಮೆಹ್ತಾಬ್ ಅಲಿ ಯವರು ತಂದೆ ತಾಯಿ, ಹೆಂಡತಿ ಮಕ್ಕಳು ಮತ್ತು ಹಲವಾರು ಬಂಧು ಮಿತ್ರರನ್ನು ಅಗಲಿದ್ದಾರೆ.ಇಂಡಿಯನ್ ಸೋಶಿಯಲ್ ಫೋರಂ ಹಫರ್ ಅಲ್ ಬಾತಿನ್ – ಜುಬೈಲ್ ಫಟಕವು ತೀವ್ರ ಸಂತಾಪ ಸೂಚಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.