(www.vknews.com) : ಕಮ್ಯುನಿಸ್ಟರು ಕೊಂದ ಬಿಜೆಪಿಗರ ಸಂಖ್ಯೆ ಎಷ್ಟು ಅಪಾರವೋ ಬಿಜೆಪಿಗರು ಕೊಂದ ಕಮ್ಯೂನಿಸ್ಟರ ಸಂಖ್ಯೆಯೂ ಅಷ್ಟೇ ಅಪಾರ… ಮುಸ್ಲಿಂ ಲೀಗಿನವರನ್ನು ಅತ್ಯಧಿಕ ಸಂಖ್ಯೆಯಲ್ಲಿ ಮಾರ್ಕಿಸ್ಟರು ,ಬಿಜೆಪಿಗರು ಕೊಂದು ಹಾಕಿದ್ದಾರೆ..
ಕಾಂಗ್ರೆಸ್ ನವರನ್ನು ಕೆಂಪು ಮತ್ತು ಕೇಸರಿ ಪಡೆ ನಡು ಬೀದಿಯಲ್ಲಿ ಇರಿದು ಕೊಂದದ್ದರ ಸಂಖ್ಯೆ ಯಾರೂ ಲೆಕ್ಕ ಇಟ್ಟು ಕೊಂಡಿಲ್ಲ.. ಮುಸ್ಲಿಂ ಲೀಗಿನವರು ಕೊಂದು ಹಾಕಿದ ಡಿ ವೈ ಎಪ್ ಐ ಮತ್ತು ಬಿಜೆಪಿ ಯವರ ಸಂಖ್ಯೇಯೇನೂ ಕಡಿಮೆಯಲ್ಲ.. ಅದಕ್ಕೆ ಅಲ್ಲಿ ಇತ್ತೀಚಿಗೆ ಇನ್ನೊಂದು ಪಕ್ಷ ಎಸ್ ಡಿ ಪಿ ಐ ಯ ಸೇರ್ಪಡೆಯಾಗಿದೆ
ಕರ್ನಾಟಕದಲ್ಲಿ ಕೂಡಾ ಕೊಲೆಗಳು ನಡೆಯುತ್ತಿತ್ತು.. ಆದರೆ ಅದರಲ್ಲಿ ಹೆಚ್ಚಿನವು ರಾಜಕೀಯದ ಕಾರಣಕ್ಕಾಗಿ ಆಗಿರದೇ ಧರ್ಮದ ಕಾರಣಕ್ಕಾಗಿತ್ತು..
ಅದೇ ವೇಳೆ ಕೊಲೆಗಳು ಮಾತ್ರ ಏಕಪಕ್ಷೀಯವಾಗಿತ್ತು.. ಕಲ್ಲಡ್ಕ ಇಸ್ಮಾಯಿಲ್ ನಿಂದ ಹಿಡಿದು ಸುರತ್ಕಲ್ ದೊಂಬಿ ತನಕ ಮುಸ್ಲಿಮರನ್ನು ಹುಡುಕಿ ಕೊಲ್ಲುತ್ತಿದ್ದರು..
ಆದರೆ ಇತ್ತೀಚೆಗೆ ಕೆಲವರ ಪ್ರತೀಕಾರ ಮನೋಭಾವದಿಂದಾಗಿ ಎರಡೂ ಕಡೆಯ ಯುವಕರು ಕೊಲೆಗೀಡಾಗುತ್ತಿರುವುದು ಕಂಡು ಬರುತ್ತಿದೆ.. ಒಟ್ಟಾರೆ ಈ ರಾಜಕೀಯಕ್ಕಾಗಿ ಸತ್ತು ಬೀಳುವವರ ಸಂಖ್ಯೆ ಅದೆಷ್ಟೋ.. ಇಲ್ಲಿ ಒಂದು ಮಾತ್ರ ಒತ್ತಿ ಹೇಳಲೇ ಬೇಕಾಗಿದೆ..
ನಮ್ಮಲ್ಲಿ ಪರಸ್ಪರ ವಿರೋಧದ ಹಾದಿಯಲ್ಲಿರುವ ಹತ್ತು ಹಲವು ಧಾರ್ಮಿಕ ಸಂಘಟನೆಗಳಿವೆ.. ಅದರೆ ಅದರ ಕಾರ್ಯಕರ್ತರು ಕೊಲೆಯಾಟಕ್ಕೆ ಇಳಿದದ್ದು ಮಾತ್ರ ತೀರಾ ಕಡಿಮೆ.. ಇಲ್ಲಿ ಧಾರ್ಮಿಕ ಸಂಘಟನೆಯ ಕಾರ್ಯಕರ್ತರು ಬೇರೆ ಬೇರೆ ರಾಜಕೀಯ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದು ಎಷ್ಟು ಸತ್ಯವೋ ರಾಜಕೀಯ ಕಾರಣಕ್ಕಾಗಿ ಕೊಲೆಯಾದದ್ದೂ ಅಷ್ಟೇ ಸತ್ಯ..
ರಾಜಕೀಯವಾಗಿ ನಡೆಯುವ ಸಂಘರ್ಷದ ವೇಳೆ ಹಲವು ಧಾರ್ಮಿಕ ಸಂಘಟನೆಯ ಕಾರ್ಯಕರ್ತರು ಮರ್ಡರ್ ಆಗಿದ್ದಾರೆ.. ಅದನ್ನು ನಾವು ಅವರ ರಾಜಕೀಯ ಹಿನ್ನಲೆಯಿಂದ ನೋಡ ಬೇಕೇ ಹೊರತು ಅವರು ಗುರುತಿಸಿ ಕೊಂಡಿರುವ ಧಾರ್ಮಿಕ ಸಂಘಟನೆಯ ಆಧಾರದಲ್ಲಿ ಅದಕ್ಕೆ ಪ್ರಚಾರ ಕೊಡುವುದು ತಪ್ಪಾಗುತ್ತದೆ. ಅದಕ್ಕೆ ಬೇರೆ ಬೇರೆ ಧಾರ್ಮಿಕ ಸಂಘಟನೆಯ ಲೇಪ ಹಚ್ಚುವುದು ಸರಿಯಾದ ಕ್ರಮವಲ್ಲ..
ಕಾಸರಗೋಡಿನ ಕೊಲೆಯನ್ನೂ ನಾವು ಇದೇ ಅರ್ಥದಲ್ಲಿ ನೋಡಬೇಕು.. ಇದರ ಹೆಸರಲ್ಲಿ ಬೇರೆ ಬೇರೆ ಧಾರ್ಮಿಕ ಕಾರ್ಯಕರ್ತರ ಮದ್ಯೆ ವೈಮನಸ್ಯ ಅನಗತ್ಯ ಚರ್ಚೆ ಅಗತ್ಯ ಕಾಣುವುದಿಲ್ಲ.. ರಾಜಕೀಯ ಅದರ ದಾರಿಯಲ್ಲಿ ಹೋಗಲಿ..ಧರ್ಮ ಅದರ ಹಾದಿಯಲ್ಲಿ ಸಾಗಲಿ..
ಧಾರ್ಮಿಕ ಗುರುಗಳು ಇಂತಹ ಕೊಲೆಗಳನ್ನು ಮುಂದಿಟ್ಟು ಜನರ ಭಾವನೆಗಳನ್ನು ಕೆದಕುವ ಕೆಲಸಕ್ಕಿಳಿಯದೇ ಸಮಸ್ತದ ಅದ್ಯಕ್ಷ ಸೈಯ್ಯಿದುಲ್ ಉಲಮಾ ಮಾಡಿದಂತೆ ಕರುಣೆ ಇಲ್ಲದ ಹೃದಯಗಳಿಗೆ ಕಾರುಣ್ಯದ ಪಾಠ ಹೇಳಿ ಕೊಡ ಬೇಕಾಗಿದೆ
ಒಟ್ಟಾರೆ ಎಲ್ಲಾ ರೀತಿಯ ಕೊಲೆಗಳು ಕೊನೆಗೊಂಡು ಜನರನ್ನು ಬದುಕಿಸುವ ಕಲೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಜೆಂಡಾದಲ್ಲಿ ಸೇರಿಸಿ ಕೊಂಡರೆ ದೇಶಕ್ಕೂ ಜನರಿಗೂ ಅದು ಹಿತ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.