(www.vknews.com) : ಪುತ್ತೂರು ತಾಲೂಕು ಮತ್ತು ಸುತ್ತಮುತ್ತಲಿನ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ-ಮಾರ್ಗದರ್ಶನ-ಪ್ರೋತ್ಸಾಹ ಕೊಡುವ ಪುತ್ತೂರು ಕಮ್ಯೂನಿಟಿ ಸೆಂಟರ್ ನ್ನು ಇಂದು ಶಾಸಕರಾದ ಸಂಜೀವ ಮಠಂದೂರ್ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ವಿಧ್ಯಾರ್ಥಿಗಳಿಗೆ ಮತ್ತು ಯುವ ಸಮೂಹಕ್ಕೆ ಆತ್ಮೀಯ ಸಲಹೆ ನೀಡುವ ಕೌಂನ್ಸಿಲಿಂಗ್ ಸೆಂಟರನ್ನು ಪುತ್ತೂರು ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಹಾಜಿ ಯವರು ಉದ್ಘಾಟಿಸಿದರು. ಕ್ಯಾರಿಯರ್ ಗೈಡೆಂನ್ಸ್, ಅಸೆಸ್ ಮೆಂಟ್, ಸ್ಟಡೀ ಸ್ಕಿಲ್, ಮೊಟಿವೇಶನ್, ಪೇರೆಂಟಿಂಗ್, ಸಪೂರ್ಟಿವ್ ಸಿಸ್ಟಂ, ಸ್ಕ್ವಾಲರ್ಶಿಫ್, ಗೋಲ್ ಸೆಟ್ಟ್ ಪ್ರೊಗ್ರಂ ಗಳನ್ನು ಹೊಂದಿರುವ ಕಮ್ಯೂನಿಟಿ ಸೆಂಟರ್ ವಿಧ್ಯಾರ್ಥಿಗಳ ಕೌಂನ್ಸಿಲಿಂಗ್ ಕೂಡ ನಡೆಸಲಿದೆ.
ವಿಧ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನದ ಅತೀ ಅಗತ್ಯವಿದೆ. ಅವರ ಶೈಕ್ಷಣಿಕ ಬದುಕು, ಸಾಮಾಜಿಕ ಬದುಕು ಮತ್ತು ವೃತ್ತಿ ಬದುಕಿಗೂ ಉತ್ತಮ ಮಾರ್ಗದರ್ಶನ ಅತೀ ಮುಖ್ಯ. ಅದಕ್ಕಾಗಿ ಅವರೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಆರಂಭವಾದ ಈ ಕಮ್ಯೂನಿಟಿ ಸೆಂಟರ್ ತಾಲೂಕಿನ ಬೇಡಿಕೆಯನ್ನು ಪೂರೈಸಿದೆ ಎಂದರೆ ತಪ್ಪಾಗಲಾರದು ಎಂದು ಶಾಸಕರಾದ ಸಂಜೀವ ಮಠಂದೂರ್ ಹೇಳಿದರು. ಭವಿಷ್ಯದ ತಲೆಮಾರನ್ನು ರೂಪಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲೆ ಇದೆ. ಆ ಕಾರಣಕ್ಕಾಗಿ, ವಿಧ್ಯಾರ್ಥಿ ಸಮೂಹಕ್ಕೆ ಸರಿಯಾದ ಸಲಹೆ -ಸೂಚನೆ ಈ ಕಮ್ಯುನಿಟಿ ಸೆಂಟರ್ ಧರ್ಮಾತೀತವಾಗಿ ನೀಡುತ್ತದೆ ಎಂದು ಕೇಳಿ ಸಂತೋಷವಾಯಿತು ಎಂದರು.
ಪುತ್ತೂರು ಕಮ್ಯುನಿಟಿ ಸೆಂಟರ್ ಮೂಲಕ ಈಗಾಲೇ ಸುಮಾರು 11 ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ನಡೆದಿದ್ದನ್ನು ಶ್ಲಾಘಿಸಿದ ಶಾಸಕರು, ಮಸೀದಿಗಳ ಉಲೆಮಾಗಳು ಸ್ಥಳೀಯ ಜಮಾಅತ್ ವ್ಯಾಪ್ತಿಯ ಮನೆಗಳಿಗೆ ಬೇಟಿ ಕೊಟ್ಟು ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಪರೀಕ್ಷಾ ತಯಾರಿ ಕುರಿತಂತೆ ಸಮಾಲೋಚಿಸಿದ್ದು ಬಹಳ ಪರಿಣಾಮಕಾರಿ ಕ್ರಮ ಎಂದರು. ಈಗಾಗಲೇ ಮುಸ್ಲಿಂ ಕಮ್ಯುನಿಟಿಯ ಹಲವು ಹುಡುಗ -ಹುಡುಗಿಯರು ಶಾಲೆಗೆ ಬರುತ್ತಿಲ್ಲ. ಅಂತವರ ಪಟ್ಟಿಯನ್ನು ನಾವು ಕಮ್ಯುನಿಟಿ ಸೆಂಟರ್ ಗೆ ಕೊಡಲಿದ್ದು ಸಾಧ್ಯವಾದರೆ ಆ ವಿಧ್ಯಾರ್ಥಿಗಳನ್ನು ಮರಳಿ ಶಾಲೆಗೆ ಸೇರಿಸಲು ಸೆಂಟರ್ ಪ್ರಯತ್ನಿಸಬೇಕು ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ, ರೋಟರಿ ಪುತ್ತೂರು ಇದರ ಅಧ್ಯಕ್ಷರಾದ, ಝೆವಿಯರ್ ಡಿಸೋಝರವರು, ಸಮಾಜಕ್ಕೆ ಈಗ ಯಾವುದರ ಅಗತ್ಯ ಇದೆಯೋ ಅದನ್ನು ಈ ಕಮ್ಯೂನಿಟಿ ಸೆಂಟರ್ ರೂಪಿಸಿದೆ.ಅದರಲ್ಲೂ ಕೆಲವು ಸಮುದಾಯದ ಅನಿವಾರ್ಯತೆಯನ್ನು ಗುರುತಿಸಿ ವ್ಯವಸ್ಥಿತ ಕಾರ್ಯಾಚರಣೆ ಮೂಲಕ ಸಂಸ್ಥೆ ದುಡಿಯುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಕಮ್ಯೂನಿಟಿ ಸೆಂಟರ್ ನ ಯೋಜನೆಯನ್ನು ರಫೀಕ್ ರೋಯಲ್ ರವರು ವಿವರಿಸಿದರು.
ಕಮ್ಯೂನಿಟಿ ಸೆಂಟರ್ ಮೂಲಕ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ನ ವಿಧ್ಯಾರ್ಥಿಗಳಿಗೆ ಸ್ಪೋರ್ಟ್ ವಸ್ತ್ರ ಕ್ಕಾಗಿ ನಗದನ್ನು ಸೆಂಟರ್ ನ ಮುಖ್ಯಸ್ಥರಾದ ಹನೀಫ್ ಪುತ್ತೂರು ಇವರು ಶಾಸಕರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ, ತಾಲೂಕು ಶಿಕ್ಷಣಾಧಿಕಾರಿ ಶ್ರೀಯುತ ಲೊಕೇಶ್ ರವರು, ಕೆಡಿಪಿ ಸದಸ್ಯರಾದ ಅಬ್ದುಲ್ಲ ಕುಂಞ,ರೈತ ಮೋರ್ಚಾದ ಅಧ್ಯಕ್ಷರಾದ ಸುರೇಶ್ ಕನ್ನರಾಯ ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.