(www.vknews.com) : ಸುಖವಾಗಿರುವೆಯಾ ಎನ್ನಯ ಪ್ರಿಯ ಜೀವದಾ ಗೆಳತಿಗೆಳತಿ ನಿನ್ನಿಂದಲೇ ನಾನು ನೋವುಗಳನ್ನೆಲ್ಲಾ ಮರೆತೆ
ಮರೆತರೂ ಮತ್ತೆ ಮತ್ತೆ ನೆನಪಿಸುವಂತಾ ನಿನ್ನ ಸ್ನೇಹಸ್ನೇಹ ಎಂದರೆ ಹೀಗೇ ಇರಬೇಕು ಕಣೇ ಅದು ನಿನ್ನಂತೆ
ನಿನ್ನಂತೆ ಭುಜ ಬಳಸಿ ಪ್ರೀತಿಸುವರಾರೂ ಸಿಕ್ಕಿಲ್ಲಾ ನನಗೆನನಗೆ ನೀನೇ ಎಲ್ಲಾ ತಪ್ಪು-ಒಪ್ಪುಗಳ ತಿದ್ದಿದ ಜೊತೆಗಾರ್ತಿ
ಜೊತೆಗಾರ್ತಿ ಯಾಗೇ ಇರುವೆಯಾ ಎನ್ನ ಜೀವನ ಪೂರ್ತಿಪೂರ್ತಿ ಎನಿಸುತ್ತಿಲ್ಲವೇ ಎನಗೆ ನೀ ಜತೆಗಿಲ್ಲದ ಈ ಜೀವನ
ಜೀವನ ಹೇಗೆ ಸಾಗುತ್ತಲಿದೆಯೇ ತುಸು ಹೇಳುವೆಯಾ ನಿನ್ನನಿನ್ನ ಬಿಟ್ಟು ಹೀಗೆ ದೂರ ಇರಲಾಗವುದಿಲ್ಲಾ ನನಗೂ ಇನ್ನು
ಇನ್ನು ಸಿಕ್ಕಿಲ್ಲವೇ ಗೆಳತಿ ನಿನಗೆ ಊರಿಗೆ ಬರಲಿಕ್ಕೆ ಸಮಯಸಮಯ ಅದೆಷ್ಟೊಂದು ಬೇಗ ಕಳೆದು ಹೋಯಿತು ನೋಡು
ನೋಡು ಒಮ್ಮೆ ಹಿಂದಿರುಗಿ ಜತೆಗೆ ಕಳೆದಂತಾ ಆ ದಿನಗಳಆ ದಿನಗಳ ಸುಂದರ ನೆನಪುಗಳು ನಮ್ಮ ಜತೆಯಾಗಿರಲು
ಜತೆಯಾಗಿರಲು ನಾವಿಬ್ಬರು ಮಧುರ ಕ್ಷಣಗಳನು ನೆನಪಿಸುವೆನೆನಪಿಸುವೆ ಜಡೆ ಕವನವೊಂದ ಹೆಣೆಯುತ್ತಲಿ ಈ ಬಳಗದೊಳಗೆ!!!
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.