(www.vknews.com) ; ಸಂಭ್ರಮಿಸಲೇ ಬೇಕು ನಾವಿಂದು, ನವೆಂಬರ್ 26 ರ ಸಂವಿಧಾನ ದಿನವ !ಕೊಂಡಾಡಲೇ ಬೇಕು ನಾವಿಂದು, ಬದುಕು ಕಟ್ಟಿಕೊಟ್ಟ ಸಂವಿಧಾನದ ಮಹಾನ್ ಗ್ರಂಥವ !!
ಸ್ಮರಿಸಿಕೊಳ್ಳಲೇ ಬೇಕಿಂದು ಸಂವಿಧಾನ ರಚನೆಗೆ ಕಾರಣೀಭೂತರಾದ ಮಹಾತ್ಮಾರ !ನಮಿಸಲೇ ಬೇಕಿಂದು ಸಂವಿಧಾನದ ಕರಡು ಶಿಲ್ಪಿ ಎಂಬ ನೇತಾರರ !!
ಪಾಲಿಸಲೇ ಬೇಕು ನಾವು ಸಮಾನತೆ, ಸ್ವಾತಂತ್ರ್ಯ ಸಹೋದರತ್ವದ ಉದಾತ್ತ ಧ್ಯೇಯ !ಆಶಯವಾಗಬೇಕು ನಮ್ಮಲ್ಲಿ , ನ್ಯಾಯ,ನೀತಿ, ಸಮನ್ವಯ ಶ್ರೇಷ್ಠತೆಯ ಮೌಲ್ಯ !!
ಅರಿಯಬೇಕು, ಜಾತ್ಯಾತೀತ ನಿಲುವೇ ಪ್ರಜಾಸತ್ತಾತ್ಮ ರಾಷ್ಟ್ರವೆನ್ನಲು ಅಸ್ಮಿತೆ !ಕಾಪಾಡಲೇಬೇಕು, ಸಾರ್ವಭೌಮ ದೇಶವಾಗಿ ಉಳಿಯಲು ವಿವಿಧತೆಯಲ್ಲಿ ಏಕತೆ !!
ಪ್ರೇರಣೆಯು ಸರ್ವರಿಗೆ, ಸಮಪಾಲು ಸಮಬಾಳು ಅಭಿವ್ಯಕ್ತಿ ಸ್ವಾತಂತ್ರ್ಯದ ಸುವರ್ಣಾವಕಾಶ !ರಾಜಕೀಯ ಸಹಭಾಗಿತ್ವದಿಂದಲೇ ತುಂಬುವುದು ದೇಶದಲ್ಲಿ ಉತ್ತಮ ಜನಪ್ರತಿನಿಧಿಗಳೆಂಬ ಕೋಶ !!
ಬೆಳೆಸೋಣ ಎಲ್ಲೆಲ್ಲೂ ನಾಗರಿಕ ಸಮಾಜದ ಹಕ್ಕು, ಕರ್ತವ್ಯ ಪ್ರಜ್ಞೆ !ಅನುಸರಿಸೋಣ ವಿಧಿ, ಅನುಸೂಚಿಯ ಅರಿತು, ಪ್ರಜಾಪ್ರಭುತ್ವ ನಿಯಮಗಳ ಆಜ್ಞೆ !!
✍️ ರಮೀಝ ಯಂ.ಬಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.