(www.vknews.in) : ಸಮಸ್ತ ಸ್ಥಾಪಕ ದಿನದ ಅಂಗವಾಗಿ ಇಂದು ಬೆಳಿಗ್ಗೆ ಸಂಪ್ಯ ಮಸೀದಿಯ ವಠಾರದಲ್ಲಿ ಸಂಪ್ಯ ದಾರೂಲ್ ಉಲೂಮ್ ಮದ್ರಸ ವತಿಯಿಂದ ಸಮಸ್ತ ಸ್ಥಾಪಕ ದಿನಾಚರಣೆ ಆಚರಿಸಲಾಯಿತು. ಜಮಾತ್ ಕಾರ್ಯದರ್ಶಿ ಇಸ್ಮಾಯಿಲ್ ಬೈಲಾಡಿ ಧ್ವಜಾರೋಹಣ ನೆರವೇರಿಸಿದರು. ಸ್ವಾಗತ ಭಾಷಣವನ್ನು ಮುಸ್ತಫಾ ಫೈಝಿ ನೆರೆವೇರಿಸಿದರು. ಸಂಪ್ಯ ಖತೀಬ್ ಉಸ್ತಾದರಾದ ಬಹು| ಅಲ್-ಹಾಜಿ ಅಬ್ದುಲ್ ಹಮೀದ್ ದಾರಿಮಿ ಸಂದೇಶ ಭಾಷಣ ಮಾಡಿದರು.
ಅಬ್ದುಲ್ ಅಝೀಝ್ ಮುಸ್ಲಿಯಾರ್ ಉದ್ಘಾಟನೆ ಮಾಡಿ, ಸದರ್ ಉಸ್ತಾದ್ ಶರೀಫ್ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಅಧ್ಯಾಪಕರಾದ ಅಶ್ರಫ್ ಮುಸ್ಲಿಯಾರ್, ಹಮೀದ್ ದಾರಿಮಿ ಶುಭ ಹಾರೈಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಕುತುಬಾ ಸಮಿತಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಹು| ಅಬ್ದುಲ್ ಹಮೀದ್ ದಾರಿಮಿ ಉಸ್ತಾದರನ್ನು ಮದರಸಾ ಮೇನೇಜ್ಮೆಂಟ್ ಹಾಗೂ ಎಸ್’ಕೆಎಸ್’ಬಿವಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮೆನೇಜ್ಮೆಂಟ್ ಸದಸ್ಯರುಗಳಾದ ಅಬೂಬಕರ್ ನಿಸಾರ್, ಇಸ್ಮಾಯಿಲ್ ಅಬೂಕ್ಕರ್ ಕಲ್ಲಾರ್ಫೆ, ಜಮಾತ್ ಕಮೀಟಿ ಮೆಂಬರ್ ಅಝೀಝ್ ಸಂಪ್ಯ, ಎಸ್’ಕೆ ಎಸ್’ಎಸ್’ಎಫ್ ಸಂಪ್ಯ ಶಾಖೆಯ ಅಧ್ಯಕ್ಷರಾದ ಹಬೀಬ್ ಕೆಂಪಿ, ಕಾರ್ಯದರ್ಶಿ ಮುನೀರ್, ಕೋಶಾಧಿಕಾರಿ ಫಾರೂಕ್ ಅಮ್ಮುಂಜ ಸೇರಿದಂತೆ ಹಲವು ಹಿರಿಯರೂ ಕಿರಿಯರೂ, ಮೊಅಲ್ಲಾ ನಿವಾಸಿಗಳು, ಮದರಸಾ ವಿಧ್ಯಾರ್ಥಿಗಳು ಪಾಲ್ಗೊಂಡರು. ಕೊನೆಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಸಂಪ್ಯ ಶಾಖೆಯ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.