ಕೋಲ್ಕತ್ತಾ (ವಿಶ್ವ ಕನ್ನಡಿಗ ನ್ಯೂಸ್) : ಮೈಮೇಲೆ ಬಿದ್ದಿದ್ದ ವಿದ್ಯುತ್ ತಂತಿಯಿಂದ ಆಘಾತಕ್ಕೊಳಗಾದ ರೈಲ್ವೆ ಅಧಿಕಾರಿಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ವಿದ್ಯುತ್ ತಂತಿ ತಗುಲಿದ ಪರಿಣಾಮ ಅವರು ಸುಟ್ಟು ಕರಕಲಾಗಿದ್ದರೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಟಿಕೆಟ್ ಕಲೆಕ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಶ್ಚಿಮ ಬಂಗಾಳದ ಖರಗ್ಪುರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸುಜನ್ ಸಿಂಗ್ ಸರ್ದಾರ್ ವಿದ್ಯುತ್ ಶಾಕ್ ತಗುಲಿದವರು. ಪ್ಲಾಟ್ಫಾರ್ಮ್ನಲ್ಲಿ ಮತ್ತೊಬ್ಬ ಟಿಕೆಟ್ ಕಲೆಕ್ಟರ್ ಜೊತೆ ಮಾತನಾಡುತ್ತಿದ್ದಾಗ ಹೈ ಕರೆಂಟ್ ವಿದ್ಯುತ್ ತಂತಿ ತುಂಡಾಗಿದೆ.
ಸುಜನ್ ಸಿಂಗ್ ತಲೆ ಮೇಲೆ ತಂತಿ ಬಿದ್ದಿದೆ. ಇದರ ಪರಿಣಾಮ ಸುಜನ್ ಸಿಂಗ್ ಕೆಳಗೆ ಬಿದ್ದಿರುವ ಸಿಸಿಟಿವಿ ದೃಶ್ಯಾವಳಿ ಬಿಡುಗಡೆಯಾಗಿದೆ. ಪ್ಲಾಟ್ಫಾರ್ಮ್ನಿಂದ ಟ್ರ್ಯಾಕ್ಗೆ ಸ್ಪ್ಲಾಶ್ ಮಾಡುವುದನ್ನು ಕಾಣಬಹುದು. ವಿದ್ಯುತ್ ತಂತಿ ತುಂಡಾಗುತ್ತಿದ್ದಂತೆ ಸಮೀಪದಲ್ಲೇ ಇದ್ದ ಮತ್ತೊಬ್ಬ ಟಿಕೆಟ್ ಕಲೆಕ್ಟರ್ ಅಪಘಾತದಿಂದ ಪಾರಾಗಿದ್ದಾರೆ.
A freak accident – a long piece of loose cable, taken by a bird somehow came in contact with the OHE wire and the other end came down and touched a TTE's head. He suffered burn injuries but is out of danger and under treatment – at Kharagpur station yesterday afternoon! #Accident pic.twitter.com/ObEbzd1cOF — Ananth Rupanagudi (@Ananth_IRAS) December 8, 2022
A freak accident – a long piece of loose cable, taken by a bird somehow came in contact with the OHE wire and the other end came down and touched a TTE's head. He suffered burn injuries but is out of danger and under treatment – at Kharagpur station yesterday afternoon! #Accident pic.twitter.com/ObEbzd1cOF
— Ananth Rupanagudi (@Ananth_IRAS) December 8, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.