ಲಕ್ನೋ (ವಿಶ್ವ ಕನ್ನಡಿಗ ನ್ಯೂಸ್) : 13 ವರ್ಷದ ವಿದ್ಯಾರ್ಥಿನಿಗೆ ಶಿಕ್ಷಕರೊಬ್ಬರು ಪ್ರೇಮ ಪತ್ರ ನೀಡಿದ್ದಾರೆ. ಉತ್ತರ ಪ್ರದೇಶದ ಕನೌಜ್ನ ಸರ್ಕಾರಿ ಶಾಲೆಯೊಂದರ 47 ವರ್ಷದ ಶಿಕ್ಷಕ 8ನೇ ತರಗತಿ ವಿದ್ಯಾರ್ಥಿನಿಗೆ ಪ್ರೇಮ ಪತ್ರ ನೀಡಿದ್ದಾರೆ. ಬಳಿಕ ವಿದ್ಯಾರ್ಥಿನಿಯ ಪೋಷಕರ ದೂರಿನ ಮೇರೆಗೆ ಶಿಕ್ಷಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿಯ ಹೆಸರಿನೊಂದಿಗೆ ಪ್ರಾರಂಭವಾಗುವ ಪತ್ರದಲ್ಲಿ ಶಿಕ್ಷಕ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಬರೆದಿದ್ದಾರೆ. ಶಾಲಾ ರಜೆಯಲ್ಲಿ ನಿನ್ನನ್ನು ತುಂಬಾ ‘ಮಿಸ್’ ಮಾಡಿಕೊಳ್ಳುತ್ತೇನೆ ಎಂದು ಪ್ರೇಮ ಪತ್ರದಲ್ಲಿ ಬರೆದಿದ್ದಾರೆ. ಅವಕಾಶ ಸಿಕ್ಕರೆ ಕರೆ ಮಾಡು. ರಜೆಗೆ ಹೋಗುವ ಮೊದಲು ನೋಡಬೇಕು. ಪ್ರೀತಿ ಇದ್ದರೆ ಖಂಡಿತಾ ನೋಡಲು ಬರುತ್ತಿಯ. ಸದಾ ಪ್ರೀತಿಸುವಂತೆ ಹಾಗೂ ಈ ಪತ್ರವನ್ನು ಬೇರೆಯವರಿಗೆ ತೋರಿಸದಂತೆ ಹಾಗೂ ಓದಿದ ನಂತರ ಹರಿದು ಹಾಕುವಂತೆ ಶಿಕ್ಷಕ ಪತ್ರದಲ್ಲಿ ಸೂಚಿಸಿದ್ದಾರೆ.
ಆದರೆ ಬಾಲಕಿ ತನ್ನ ಪೋಷಕರಿಗೆ ಪತ್ರದ ಬಗ್ಗೆ ತಿಳಿಸಿದ್ದು, ನಂತರ ಪೋಷಕರು ಶಿಕ್ಷಕನ ವಿರುದ್ಧ ಕಿರುಕುಳದ ದೂರು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ವಿಚಾರಿಸಿದಾಗ ಕ್ಷಮೆಯಾಚಿಸುವಂತೆ ಶಿಕ್ಷಕನನ್ನು ಕೇಳಿದಾಗ ಅವರು ಕಿವಿಗೊಡಲಿಲ್ಲ, ಬದಲಾಗಿ ಬೆದರಿಕೆ ಹಾಕಿದರು ಎಂದು ಪೋಷಕರು ಹೇಳುತ್ತಾರೆ.
ಬಾಲಕಿಯ ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದ್ದು, ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಶಿಕ್ಷಕ ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಕರ ಸಂಘವೂ ಹೇಳಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.