(www.vknews.in) : ಕೇಂದ್ರ ಜುಮಾ ಮಸೀದಿ ಅಕ್ಕರಂಗಡಿ ಹಾಗೂ ಮಾದಕ ದ್ರವ್ಯ ವಿರೋಧಿ ಹೋರಾಟ ಸಮಿತಿ ಅಕ್ಕರಂಗಡಿ-ನೆಹರುನಗರ ವತಿಯಿಂದ ಆದಿತ್ಯವಾರ ಸಂಜೆ ಮಾದಕ ದ್ರವ್ಯದ ವಿರುದ್ಧ ಜನಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥಾ ನಡೆಯಿತು.
ಅಕ್ಕರಂಗಡಿ ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಬಾವುಂಞಿ, ಧರ್ಮ ಗುರುಗಳಾದ ಉಸ್ಮಾನ್ ರಾಝಿ ಬಾಖವಿ, ಎನ್.ಹೆಚ್ ಆದಂ ಫೈಝಿ, ಅಬ್ದುಲ್ ಸಲಾಂ ಇರ್ಫಾನಿ, ಮಾಜಿ ಅಧ್ಯಕ್ಷರಾದ ಪಿ.ಎಸ್ ಅಬ್ದುಲ್ ಹಮೀದ್, ದಾರುಲ್ ಇಸ್ಲಾಂ ಶಾಲೆಯ ಮುಖ್ಯೋಪಾಧ್ಯಾಯರಾದ ಅಬ್ದುಲ್ ಹಮೀದ್, ಕಾಂಗ್ರೆಸ್ ನಾಯಕರಾದ ಇಕ್ಬಾಲ್ ಜೈನರಪೇಟೆ, ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಪಿ.ಜೆ ಅಬ್ದುಲ್ ರಹಿಮಾನ್, ಮಾದಕ ದ್ರವ್ಯ ವಿರೋಧಿ ಸಮಿತಿ ಅಧ್ಯಕ್ಷ ತಸ್ಲೀಂ ಆರೀಫ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಅಜಾದ್ ಫ್ರೆಂಡ್ಸ್ ಸರ್ಕಲ್ (ರಿ) ನೆಹರು ನಗರ, ಮುಸ್ಲಿಂ ಯುವ ಜನ ವೇದಿಕೆ ರಿ., ನುಸ್ರತುಲ್ ಮಸಾಕೀನ್ ಅಕ್ಕರಂಗಡಿ, ನೂರುಲ್ ಹುದಾ ಯಂಗ್ಮನ್ಸ್ ಅಸೋಸಿಯೇಶನ್, ಟೀಮ್ ಎ.ಎಮ್.ಸಿ.ಸಿ, ಯೂತ್ ಕಾಂಗ್ರೆಸ್ ಅಕ್ಕರಂಗಡಿ-ನೆಹರುನಗರ, ಎಸ್.ಡಿ.ಪಿ.ಐ ಅಕ್ಕರಂಗಡಿ-ನೆಹರುನಗರ, ನಝರ್ ಸ್ಪೋಟ್ಸ್ ಕ್ಲಬ್, ಗುಡ್ಲಕ್ ಕ್ರಿಕೆಟರ್ಸ್ ಹಾಗೂ ಊರಿನ ಇತರೆ ಸಂಘ ಸಂಸ್ಥೆಗಳು ಒಟ್ಟು ಸೇರಿ ಮಾದಕ ದ್ರವ್ಯ ಮುಕ್ತ ನಮ್ಮೂರು ಎಂಬ ಊರಿನ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ನೂರಾರು ನಾಗರೀಕರು ಕಾಲ್ನಡಿಗೆ ಮೂಲಕ ಮಾದಕ ದ್ರವ್ಯದ ವಿರುದ್ಧ ಜನಜಾಗೃತಿ ಮೂಡಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.